ಅವಿರೋಧವಾಗಿ ಆಯ್ಕೆ ಆದ ಹಿಮಂತ್ ಬಿಸ್ವಾ, 2018ರ ಜೂನ್‌'ನಲ್ಲಿ ನಡೆಯಲಿರುವ ಚುನಾವಣೆವರೆಗೂ ಅಧಿಕಾರದಲ್ಲಿರಲಿದ್ದಾರೆ

ಲಖನೌ(ಏ.23): ಬಿಜೆಪಿ ನಾಯಕ ಹಾಗೂ ಅಸ್ಸಾಂ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಂತ್ ಬಿಸ್ವಾ ಅವರನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಆದ ಅವರು 2018ರ ಜೂನ್‌'ನಲ್ಲಿ ನಡೆಯಲಿರುವ ಚುನಾವಣೆವರೆಗೂ ಅಧಿಕಾರದಲ್ಲಿರಲಿದ್ದಾರೆ ಎಂದು ಬಿಐಎ ಪ್ರಧಾನ ಕಾರ್ಯದರ್ಶಿ ಅನುಪ್ ನಾರಂಗ್ ತಿಳಿಸಿದ್ದಾರೆ.

ಮಾಜಿ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಅವರ ಅಕಾಲಿಕ ಮರಣದಿಂದಾಗಿ ಅಧ್ಯಕ್ಷ ಸ್ಥಾನ ತೆರವುಗೊಂಡಿತ್ತು. ಇದೇ ವೇಳೆ ಇನ್ಮುಂದೆ ಭಾರತೀಯ ಸೂಪರ್ ಸೀರಿಸ್ ಪಂದ್ಯವಳಿಯನ್ನು ಅಖಿಲೇಶ್ ದಾಸ್ ಗುಪ್ತಾ ವಿಶ್ವ ಸೂಪರ್ ಸೀರಿಸ್ ಪಂದ್ಯಾವಳಿ ಎಂದು ಕರೆಯಲಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.