ವೈರಲ್ ಆಯ್ತು ಹಿಮಾ ದಾಸ್ ಅವರ ಆನಂದ ಭಾಷ್ಪದ ವಿಡಿಯೋ; ಹೀಗಿತ್ತು ಆ ಕ್ಷಣ

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 14, Jul 2018, 6:20 PM IST
Hima Das Weeps Tears of Joy While Singing National Anthem
Highlights

ಫಿನ್’ಲ್ಯಾಂಡ್’ನ ಥಾಂಪೆರೆಯಲ್ಲಿ ನಡೆದ ಕಿರಿಯರ ವಿಶ್ವ ಚಾಂಪಿಯನ್’ಶಿಪ್’ನ 400 ಮೀಟರ್ ಓಟದಲ್ಲಿ ಅಸ್ಸಾಂನ ಹಿಮಾ ದಾಸ್ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದ[ಟ್ರ್ಯಾಕ್ ವಿಭಾಗ]ದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ವಿಶ್ವದಾಖಲೆಯನ್ನು ಹಿಮಾ ದಾಸ್ ನಿರ್ಮಿಸಿದ್ದಾರೆ.

ಬೆಂಗಳೂರು[ಜು.14]: ಫಿನ್’ಲ್ಯಾಂಡ್’ನ ಥಾಂಪೆರೆಯಲ್ಲಿ ನಡೆದ ಕಿರಿಯರ ವಿಶ್ವ ಚಾಂಪಿಯನ್’ಶಿಪ್’ನ 400 ಮೀಟರ್ ಓಟದಲ್ಲಿ ಅಸ್ಸಾಂನ ಹಿಮಾ ದಾಸ್ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದ[ಟ್ರ್ಯಾಕ್ ವಿಭಾಗ]ದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ವಿಶ್ವದಾಖಲೆಯನ್ನು ಹಿಮಾ ದಾಸ್ ನಿರ್ಮಿಸಿದ್ದಾರೆ.

ಐತಿಹಾಸಿಕ ಗೆಲುವಿನ ಬಳಿಕ ಪ್ರಶಸ್ತಿ ಪ್ರಧಾನದ ವೇಳೆ ಹಿಮಾ ದಾಸ್ ಆನಂದ ಭಾಷ್ಪ ಸುರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 
ಹೀಗಿತ್ತು ಆ ಕ್ಷಣ..


ಹಿಮಾ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವಾರು ದಿಗ್ಗಜರು ಅಭಿನಂದನೆ ಸಲ್ಲಿಸಿದ್ದಾರೆ.

ಅಸ್ಸಾಂನ ರೈತ ಕುಟುಂಬದ ಹಿಮಾ ಕಳೆದ ಏಫ್ರಿಲ್’ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಭಾಗವಹಿಸಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ವಿಶ್ವ ಚಾಂಪಿಯನ್’ಶಿಪ್’ನ ಅಂತರಾಷ್ಟ್ರೀಯ ಮಟ್ಟದಲ್ಲಿ  ಚಿನ್ನ ಗೆಲ್ಲುವ ಮೂಲಕ ಹೊಸ ಆಶಾಕಿರಣವನ್ನು ಹುಟ್ಟುಹಾಕಿದ್ದಾರೆ. ಜತೆಗೆ ಭವಿಷ್ಯದಲ್ಲೂ ಇನ್ನಷ್ಟು ಪದಕ ಗೆಲ್ಲುವ ಭರವಸೆ ಮೂಡಿಸುವುದರೊಂದಿಗೆ ದೇಶದ ಸಾಕಷ್ಟು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
   

loader