ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಮನುಷ್ಯನ್ನಾಗಿರಲಿಲ್ಲ. ಆತನನ್ನ ಕೆಣಕಿದ್ರೆ ಹೇಗಿರುತ್ತೆ ಅನ್ನೋದಕ್ಕೆ ನಿನ್ನೆಯ ಪಂದ್ಯ ಸಾಕ್ಷಿಯಾಗಿಬಿಡ್ತು. ಆಸೀಸ್'​​ಗಳು ಮಾಡಿದ್ದ ಒಂದು ಎಡವಟ್ಟಿಗೆ ಕೊಹ್ಲಿ ನೀಡಿದ್ದ ಉತ್ತರವನ್ನ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ.

ನಾವೆಂದೂ ನೋಡಿರದಿದ್ದ ವಿರಾಟ್ ಕೊಹ್ಲಿಯನ್ನ ನಿನ್ನೆ ನೋಡಲು ನಮಗೆ ಕಾಣಸಿಕ್ಕಿತ್ತು. ಅಗ್ರಸ್ಸೀವ್​​ ನಾಯಕ ಎಂದಷ್ಟೇ ತಿಳಿದ್ದಿದ್ದ ನಮಗೆ ಅವರೆಷ್ಟು ಅಗ್ರಸ್ಸೀವ್​ ಎಂಬುದು ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಾವು ಕಂಡುಕೊಂಡೆವು. ಒಂದೇ ಮಾತಿನಲ್ಲಿ ಹೇಳಬೇಕಾದ್ರೆ ಕೊಹ್ಲಿಯ ನಿಜ ಬಣ್ಣ ನಿನ್ನೆ ಕಾಣಸಿಕ್ತು.

ವಿಕೆಟ್​​ ಕಿತ್ತ ಬೌಲರ್​​​'ಗಿಂತ ಕೊಹ್ಲಿ ಸಂಭ್ರಮ ಬೆಸ್ಟ್​​​

' ನಿನ್ನೆ ಕುಲ್​ದೀಪ್​ ಯಾದವ್​ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾಗಲು ಇಷ್ಟು ಸಂಭ್ರಮ ಪಟ್ಟಿರಲಿಲ್ಲ. ಚಹಲ್​ ಅದ್ಭುತವಾಗಿ ವಿಕೆಟ್​​ ಪಡೆದ್ರೂ ಅಷ್ಟು ಸಂಭ್ರಮಿಸರಲಿಲ್ಲ. ಪಾಂಡ್ಯ ಮತ್ತು ಭುವಿ ಪ್ರಮುಖ ವಿಕೆಟ್​​​ಗಳನ್ನ ಪಡೆದಾಗಲೂ ಅಷ್ಟು ಖುಷಿ ಪಡಲಿಲ್ಲ. ಆದ್ರೆ ಇದನ್ನೆಲ್ಲಾ ಆನಂದಿಸುತ್ತಿದ್ದ ನಾಯಕ ವಿರಾಟ್​​ ಕೊಹ್ಲಿಯ ಸಂಭ್ರಮ ಮಾತ್ರ ನಿನ್ನೆಯ ಪಂದ್ಯದ ಮೇನ್​ ಅಟ್ರಾಕ್ಷನ್​ ಆಗಿಬಿಟ್ಟಿತ್ತು. ಪ್ರತೀ ವಿಕೆಟ್'​​​ಗೂ ಕೊಹ್ಲಿ ಸಂಭ್ರಮಿಸುತ್ತಿದ್ದ ರೀತಿ ಅವರ ನಿಜ ಬಣ್ಣ ಬಯಲು ಮಾಡಿತು.

ಔಟಾದ ಪ್ರತೀ ಬ್ಯಾಟ್ಸ್​​'ಮನ್'​ಗೂ ಕಿಚಾಯಿಸಿದ ಕೊಹ್ಲಿ

ನಿನ್ನೆ ಕೊಲ್ಕತ್ತಾದ ಈಡನ್​ ಗಾರ್ಡನ್​​'ನಲ್ಲಿ ನೆರದಿದ್ದ 40 ಸಾವಿರ ಪ್ರೇಕ್ಷಕರ ಸೆಲೆಬ್ರೇಶನ್​​ ಮತ್ತು ಪ್ರತೀ ವಿಕೆಟ್​​ ಪಡೆದಾಗಲೂ ಕೊಹ್ಲಿ ಪಡುತ್ತಿದ ಸಂಭ್ರಮ ಎರಡನ್ನೂ ತಕಡಿಯಲ್ಲಿ ಹಾಕಿ ತೂಗಿದ್ರೆ ಕೊಹ್ಲಿಯ ಸೆಲಬ್ರೇಷನ್​ ಮತ್ತು ಅವರ ಕೂಗಾಟವೇ ಹೆಚ್ಚು ತೂಗುತ್ತಿತ್ತು. ಆ ಮಟ್ಟಕ್ಕಿತ್ತು ಕೊಹ್ಲಿಯ ನಿನ್ನೆಯ ಆರ್ಭಟ. ಸದಾ ಧೋನಿ ಪಕ್ಕದಲ್ಲಿ ಅಥವಾ ಬೌಲರ್​​​ ಪಕ್ಕದಲ್ಲಿ ಫೀಲ್ಡ್​​ ಮಾಡುತ್ತಿದ್ದ ಕೊಹ್ಲಿ ಪ್ರತೀ ವಿಕೆಟ್​​​ ಬಿದ್ದಾಕ್ಷಣ ಔಟಾದ ಬ್ಯಾಟ್ಸ್​​ಮನ್​ ಬಳಿ ಬಂದು ಕಿಚಾಯಿಸಿ, ಅವರನ್ನು ಗುರಾಯಿಸಿ ನಂತರ ಪೆವಿಲಿಯನ್​'ಗೆ ಕಳುಹಿಸುತ್ತಿದ್ರು.

ಕೊಹ್ಲಿ ಸಂಭ್ರಮಾಚರಣೆ ಹಿಂದಿದೆ ಒಂದು ಕಿರಿಕ್​​..!

ಅಷ್ಟಕ್ಕೂ ನಿನ್ನೆ ಕೊಹ್ಲಿ ಮೈಮೇಲೆ ದೇವರು ಬಂದವರಂತೆ ಆಡುತ್ತಿದ್ದಿದ್ದು ಯಾಕೆ ಗೊತ್ತಾ..? ಪ್ರತೀ ವಿಕೆಟ್​​​'ಗೂ ನಾಯಕ ಬ್ಯಾಟ್ಸ್​​ಮನ್​ ಬಳಿ ಹೋಗಿ ಹೀಯಾಳಿಸುತ್ತಿದಿದ್ದು ಯಾಕೆ ಗೊತ್ತಾ..? ಆಸೀಸ್​​ ಬ್ಯಾಟಿಂಗ್​ ವೇಳೆ ನಡೆದ ಒಂದು ಕಿರಿಕ್​​.

ಟೀಂ ಇಂಡಿಯಾ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ, ಕೊಹ್ಲಿ ಮತ್ತು ಜಾಧವ್​​ ಬ್ಯಾಟ್​​​ ಮಾಡುತ್ತಿದ್ದಾಗ ಆಸೀಸ್​​ ಕೀಪರ್​​​ ಮ್ಯಾಥ್ಯೂ ವೇಡ್​​ ಮತ್ತು ಮಾರ್ಕಸ್​​ ಸ್ಟೋನಿಸ್​​​, ಕೊಹ್ಲಿಯನ್ನ ಇನ್ನಿಲ್ಲದಂತೆ ರೇಗಿಸಿದ್ರು. ಕೊಹ್ಲಿಗೆ ಸ್ಲೆಡ್ಜ್​​ ಮಾಡಿದ್ರು. ಗೊತ್ತಲ್ವಾ ಕೊಹ್ಲಿಗೆ ಸ್ಲೆಡ್ಜ್​​ ಮಾಡಿದ್ರೆ ಏನಾಗುತ್ತೆ ಅಂತ. ಬ್ಯಾಟಿಂಗ್​ನಲ್ಲಿ 92 ರನ್​ ಬಾರಿಸಿದ್ರು. ಕೊಹ್ಲಿ ಬ್ಯಾಟಿಂಗ್​ ಮಾಡುವಾಗ ಹೇಗೆ ಅವರನ್ನ ರೇಗಿಸಿದರೋ, ಅದೇ ರೀತಿ ಆಸೀಸ್​​ ಬ್ಯಾಟ್ಸ್​​ಮನ್'​ಗಳನ್ನ ಹೀಯಾಳಿಸಿದ್ರು.