ನಾಯಕ ಹೆರಾತ್ ಅವರ ಚಾಣಕ್ಷ ಆಟದಿಂದಾಗಿ ಶ್ರೀಲಂಕಾ 2-0 ಅಂತರದಿಂದ ಜಿಂಬಾಬ್ವೆ ಎದುರು ಸರಣಿ ಜಯಿಸಿದೆ. ಈ ಸರಣಿಯ ಎರಡು ಪಂದ್ಯಗಳಲ್ಲಿ ಹೆರಾತ್ 19 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದಾರೆ.

ಹರಾರೆ(ನ.010): ಶ್ರೀಲಂಕಾದ ಅನುಭವಿ ಸ್ಪಿನ್ನರ್ ರಂಗಣ ಹೆರಾತ್ ಅವರ ಸ್ಪಿನ್ ಮೋಡಿಗೆ ಸಿಲುಕಿದ ಜಿಂಬಾಬ್ವೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ಶರಣಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಯಕ ಹೆರಾತ್ ಅವರ ಚಾಣಕ್ಷ ಆಟದಿಂದಾಗಿ ಶ್ರೀಲಂಕಾ 2-0 ಅಂತರದಿಂದ ಜಿಂಬಾಬ್ವೆ ಎದುರು ಸರಣಿ ಜಯಿಸಿದೆ. ಈ ಸರಣಿಯ ಎರಡು ಪಂದ್ಯಗಳಲ್ಲಿ ಹೆರಾತ್ 19 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದ್ದಾರೆ.

ಅಕ್ಟೋಬರ್ 29ರಿಂದ ನ.2ರವರೆಗೆ ನಡೆದಿದ್ದ ಮೊದಲ ಪಂದ್ಯದಲ್ಲಿ ಶ್ರೀಲಂಕಾ 225ರನ್‌ಗಳಿಂದ ಜಯ ಸಾಧಿಸಿದ್ದರೆ, ಇದೇ 6ರಿಂದ 10ರವರೆಗೆ ನಡೆದ ಎರಡನೇ ಪಂದ್ಯದಲ್ಲಿ ಪ್ರವಾಸಿ ಲಂಕಾ 257ರನ್‌ಗಳ ಅಂತದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

ಶ್ರೀಲಂಕಾ ಕ್ರಿಕೆಟ್ ದಂತಕಥೆ ಮುತ್ತಯ್ಯಾ ಮುರುಳೀಧರನ್ ಹಾಗೂ ಡೇಲ್ ಸ್ಟೇನ್ ನಂತರ ಟೆಸ್ಟ್ ಆಡುವ ಎಲ್ಲಾ ತಂಡಗಳ ಎದುರು ಒಂದೇ ಇನಿಂಗ್ಸ್'ನಲ್ಲಿ ಐದು ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರ ಎಂಬ ಶ್ರೇಯಕ್ಕೂ ರಂಗನಾ ಹೆರಾತ್ ಪಾತ್ರರಾಗಿದ್ದಾರೆ.