ಕಾಮನ್'ವೆಲ್ತ್ ಕ್ರೀಡಾಕೂಟ : ಶೂಟಿಂಗ್'ನಲ್ಲಿ ಹೀನಾಗೆ ಚಿನ್ನ, ಬಾಕ್ಸಿಂಗ್'ನಲ್ಲಿ ಮತ್ತೆರಡು ಪದಕ ಖಚಿತ

First Published 10, Apr 2018, 3:23 PM IST
Heena Sidhu wins gold in 25m Pistol
Highlights

ಬಾಕ್ಸಿಂಗ್'ನಲ್ಲಿ  49 ಕೆಜಿ ವಿಭಾಗದಲ್ಲಿ  ಅಮಿತ್ ಪಾಂಗಾಲ್ ಹಾಗೂ ನಮಾನ್ ತನ್ವಾರ್ 91 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ನವದೆಹಲಿ(.10): ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಶೂಟರ್ ಹೀನಾ ಸಿಧು 25ಮೀ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.

50 ಮೀ ವಿಭಾಗದಲ್ಲಿ ಚೈನ್ ಸಿಂಗ್ ಫೈನಲ್'ನಲ್ಲಿ 4ನೇ ಸ್ಥಾನ ಪಡೆದರು. ಹೀನಾ ಚಿನ್ನದೊಂದಿಗೆ ಭಾರತ 6ನೇ ದಿನವಾದ ಇಂದು 11ನೇ ಸ್ವರ್ಣ ಪದಕ ಪಡೆದು ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಉಳಿಸಿಕೊಂಡಿದೆ. ಬಾಕ್ಸಿಂಗ್'ನಲ್ಲಿ  49 ಕೆಜಿ ವಿಭಾಗದಲ್ಲಿ  ಅಮಿತ್ ಪಾಂಗಾಲ್ ಹಾಗೂ ನಮಾನ್ ತನ್ವಾರ್ 91 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ತಲುಪಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಪುರುಷರ ಹಾಕಿಯಲ್ಲಿ ಭಾರತ ತಂಡ ಮಲೇಷ್ಯಾವನ್ನು ಮಣಿಸಿದೆ.       

loader