Asianet Suvarna News Asianet Suvarna News

ಒಲಂಪಿಕ್ಸ್ ಓಟಗಾರನಿಗಿಂತ ವೇಗವಾಗಿ ಓಡುವ ಅಂಗವಿಕಲ ಅಥ್ಲೀಟ್

he race faster than Rio Olympics gold medallist

ರಿಯೋ ಡಿ ಜನೈರೋ(ಸೆ.15): ಪ್ಯಾರಾಲಿಂಪಿಕ್ಸ್​ನ 1500 ಮೀಟರ್ ಪುರುಷರ ಟಿ13 ಕ್ಲಾಸ್ ಓಟದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್​ಗೆ ಅಲ್ಗೇರಿಯಾದ ಅಬ್ದೆಲ್ಲಾತಿಫ್ ಬಕ ಸೆಡ್ಡು ಹೊಡೆದಿದ್ದಾರೆ. 

ಪುರುಷರ ಟಿ13 ಕ್ಲಾಸ್ ಪ್ಯಾರಾಲಿಂಪಿಕ್ಸ್​ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಅಬ್ದೆಲ್ಲಾತಿಫ್ ಚಿನ್ನದ ಪದಕ ಗೆದ್ದುಕೊಂಡರು. ವಿಶೇಷ ಅಂದ್ರೆ ಅಬ್ದೆಲ್ಲಾತಿಫ್, ರಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಗೆದ್ದಿರುವ ಅಮೆರಿಕದ ಅಥ್ಲೀಟ್ ಮ್ಯಾಥ್ಯೂ ಸೆಂಟ್ರೋವಿಝ್ ಗಿಂತಲೂ ವೇಗವಾಗಿ ಓಡಿ, ಬೇಗನೆ ಗುರಿಮುಟ್ಟಿದ್ದಾರೆ.

ಚಿನ್ನಕ್ಕೆ ಕೊರಳೊಡ್ಡಿದ ಅಬ್ದೆಲ್ಲಾತಿಫ್ 3:48:29ರಲ್ಲಿ 1500 ಮೀಟರ್ ಓಡಿದ್ರು. ರಿಯೋ ಒಲಿಂಪಿಕ್ಸ್ ನಲ್ಲಿ ನಡೆದ 1500 ಮೀಟರ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿರುವ ಮ್ಯಾಥ್ಯೂ 3:50:00 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ್ದರು. 

Follow Us:
Download App:
  • android
  • ios