Having A Ball in The Water: ರಾಜ್ಯದ ವಾಟರ್‌ ಪೋಲೋ ಕ್ರೀಡಾಪಟುಗಳ ಕುರಿತಾದ ಕೃತಿ ಬಿಡುಗಡೆ

* ಕರ್ನಾಟಕದ ವಾಟರ್‌ ಪೋಲೋ ಸಾಧಕರ ಕುರಿತಾದ ಪುಸ್ತಕ ಬಿಡುಗಡೆ
* ಬೆಂಗಳೂರಿನಲ್ಲಿ ಭಾನುವಾರ(ಜು.3)ದಂದು ಬೆಳಗ್ಗೆ ಪುಸ್ತಕ ಬಿಡುಗಡೆ
* ಎಸ್ ಎಸ್ ಶ್ರೀಕುಮಾರ್ ಅವರು ರಚಿಸಿರುವ 'ಹ್ಯಾವಿಂಗ್ ಎ ಬಾಲ್‌ ಇನ್‌ ದಿ ವಾಟರ್ಸ್‌'

Having A Ball in the Water book release at July 3rd in Bengaluru kvn

ಬೆಂಗಳೂರು(ಜು.02): ಯೂರೋಪ್, ಅಮೆರಿಕ, ಬ್ರೆಜಿಲ್, ಕೆನಡಾ ಹಾಗೂ ಚೀನಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಾಟರ್‌ ಪೋಲೋ (Water Polo) ಕ್ರೀಡೆಯಲ್ಲಿ ನಮ್ಮವರು ಛಾಪು ಮೂಡಿಸಿದ್ದಾರೆ. 'ವಾಟರ್ ಪೋಲೋ' ಕ್ರೀಡೆಯಲ್ಲಿ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಕ್ರೀಡಾಪಟುಗಳ ಸಾಧನೆಯನ್ನು ಪರಿಚಯಿಸುವ ಪ್ರಯತ್ನಕ್ಕೆ ಹಿರಿಯ ಪತ್ರಕರ್ತ ಎಸ್ ಎಸ್ ಶ್ರೀಕುಮಾರ್ ಮುಂದಾಗಿದ್ದಾರೆ. ಹಿರಿಯ ಪತ್ರಕರ್ತ ಎಸ್ ಎಸ್ ಶ್ರೀಕುಮಾರ್ ಬರೆದಿರುವ 'ಹ್ಯಾವಿಂಗ್ ಎ ಬಾಲ್‌ ಇನ್‌ ದಿ ವಾಟರ್ಸ್‌' ಕೃತಿ ಇದೇ ಭಾನುವಾರ(ಜು.03) ನಗರದಲ್ಲಿ ಬಿಡುಗಡೆಗಡೆಯಾಗಲಿದೆ.

ಇಲ್ಲಿನ ವಸಂತ ವಿಹಾರ ವಾಟರ್ ಪೋಲೋ ಕ್ಲಬ್ ಸಹಭಾಗಿತ್ವದಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಕರ್ನಾಟಕ ಈಜುಸಂಸ್ಥೆಯ ಅಧ್ಯಕ್ಷರಾಗಿರುವ ಗೋಪಾಲ್ ಬಿ ಹೊಸೂರು ಅವರು 'ಹ್ಯಾವಿಂಗ್ ಎ ಬಾಲ್‌ ಇನ್‌ ದಿ ವಾಟರ್ಸ್‌' ಕೃತಿ ಬಿಡುಗಡೆ ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಷೇತ್ರ ನಿರ್ದೇಶಕರಾದ ಶ್ರೀಮತಿ ಋತು 'ಎ' ಪಾತಿಕ್‌ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೃತಿಯ ಲೇಖಕರಾದ ಎಸ್ ಎಸ್‌ ಶ್ರೀಕುಮಾರ್ ಕೃತಿ ಪರಿಚಯವನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್ ಎ ರವಿ ಸುಬ್ರಮಣ್ಯ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉದಯ್ ಬಿ ಗರುಡಾಚಾರ್ ಅವರು ಪಾಲ್ಗೊಳ್ಳಲಿದ್ದಾರೆ.

ಇನ್ನು  'ಹ್ಯಾವಿಂಗ್ ಎ ಬಾಲ್‌ ಇನ್‌ ದಿ ವಾಟರ್ಸ್‌' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಅಕ್ವಾಟಿಕ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಎಸ್ ಆರ್ ಸಿಂಧಿಯಾ ಹಾಗೂ ಎಂ ಎಸ್ ಭೂಷಣ್ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಎಸ್ ಆರ್ ಸಿಂಧಿಯಾ ಪರಿಚಯ:

ಆರ್ಟ್‌ ಆಫ್ ಸ್ವಿಮ್ಮಿಂಗ್ ಫೌಂಡೇಶನ್‌ನ ಸ್ಥಾಪಕ ನಿರ್ದೇಶಕರಾಗಿರುವ ಎಸ್ ಆರ್ ಸಿಂಧಿಯಾ ಅವರು ಜಲ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ದಶಕಗಳ ಕಾಲ ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಲವು ಕ್ರೀಡಾ ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತು ನೂರಾರು ಕ್ರೀಡಾ ಉತ್ಸಾಹಿಗಳಿಗೆ ತರಬೇತಿ ನೀಡಿ ಬೆಳೆಸಿದ್ದಾರೆ. ಕರ್ನಾಟಕದಲ್ಲಿ ಜಲಕ್ರೀಡೆಯ ಮುಂಚೂಣಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಎಂ ಎಸ್ ಭೂಷಣ್ ಕುಮಾರ್ ಕಿರು ಪರಿಚಯ

ಗ್ಲೆನ್ ಮಾರ್ಕ್ ಅಕ್ವಾಟಿಕ್ ಫೌಂಡೇಶನ್‌ನ ಮುಖ್ಯ ತರಬೇತುದಾರರಾಗಿರುವ ಎಂ ಎಸ್ ಭೂಷಣ್ ಕುಮಾರ್, 1994ರಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಬಿಎಸಿಯಲ್ಲಿ ವಾಟರ್ ಪೋಲೋ ತಂಡವನ್ನು ಪ್ರಾರಂಭಿಸಿದರು. 1995 ಮತ್ತು 2002ರ ನಡುವೆ ವಿವಿಧ ಜೂನಿಯರ್ ಮತ್ತು ಹಿರಿಯ ತಂಡಗಳಿಗೆ ವಾಟರ್‌ ಪೋಲೋ/ಈಜು ತಂಡದ ತರಬೇತುದಾರರಾಗಿದ್ದರು. ಅನೇಕ ಫಿನಾ ಈಜು ಮತ್ತು ವಾಟರ್‌ ಪೋಲೋ ಚಿಕಿತ್ಸಾಲಯಗಳಲ್ಲಿ ಭಾಗಿಯಾಗಿದ್ದರು.  

ಕೃತಿಯ ಲೇಖಕರ ಪರಿಚಯ:

ಎಸ್ ಎಸ್ ಶ್ರೀಕುಮಾರ್ ಅವರು ರಾಜ್ಯದ ಹಿರಿಯ ಕ್ರೀಡಾ ಪತ್ರಕರ್ತರಾಗಿದ್ದು, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ರಾಷ್ಟ್ರಮಟ್ಟದ ಅಕ್ವಾಟಿಕ್ ಕ್ರೀಡಾಕೂಟಗಳಲ್ಲಿ ಡಿಡಿ ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರರಾಗಿಯೂ ಸೈ ಎನಿಸಿಕೊಂಡಿದ್ದರು.

Latest Videos
Follow Us:
Download App:
  • android
  • ios