ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಎರಡು ಇನಿಂಗ್ಸ್'ನಲ್ಲೂ ಶತಕ ಬಾರಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್'ಮನ್ ಶ್ರೀಲಂಕಾ ವಿರುದ್ಧ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಶತಕ ಬಾರಿಸುವ ಮೂಲಕ ಸ್ಮರಣೀಯವಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಮಹತ್ವದ ಪಂದ್ಯದಲ್ಲಿ ಸಾಕಷ್ಟು ಅನುಭವಿ ಕ್ರಿಕೆಟಿಗರು ವಿಫಲರಾಗುವುದೇ ಹೆಚ್ಚು. ಆದರೆ ಕೆಲವೇ ಕೆಲವು ಆಟಗಾರರು ಮಾತ್ರ ತಮ್ಮ ನೂರನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಅಂತಹ ಸಾಧಕರ ಪಟ್ಟಿಗೀಗ ಹಾಶೀಮ್ ಆಮ್ಲಾ ಸೇರ್ಪಡೆಯಾಗಿದ್ದಾರೆ.

ಅದರಲ್ಲೂ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಎರಡು ಇನಿಂಗ್ಸ್'ನಲ್ಲೂ ಶತಕ ಬಾರಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.

ಇಲ್ಲಿಯವರೆಗೆ ಒಟ್ಟು ಎಂಟು ಮಂದಿ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದಾರೆ; ಅವರುಗಳೆಂದರೆ

1. ಕಾಲಿನ್ ಕೌಡ್ರಿ(ENG)

2. ಜಾವೇದ್ ಮಿಯಾಂದಾದ್(PAK)

3. ಗೋರ್ಡನ್ ಗ್ರೀನೀಜ್(WI)

4. ಅಲೆಕ್ಸ್ ಸ್ಟುವರ್ಟ್(ENG)

5. ಇಂಜಮಾಮ್ ಉಲ್-ಹಕ್(PAK)

6. ಗ್ರಹಾಂ ಸ್ಮಿತ್(SA)

7. ರಿಕಿ ಪಾಂಟಿಂಗ್(AUS)

8. ಹಾಶೀಂ ಆಮ್ಲಾ(SA)