Asianet Suvarna News Asianet Suvarna News

ಕೊಹ್ಲಿ ದಾಖಲೆ ಅಳಿಸಿಹಾಕಿದ ಆಮ್ಲಾ..!

ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 108 ರನ್‌ ಗಳಿಸಿದ ಆಮ್ಲಾ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 27 ಶತಕ ಬಾರಿಸಿದ ದಾಖಲೆ ಬರೆದರು. ಕೊಹ್ಲಿ ಈ ಸಾಧನೆ ಮಾಡಲು 169 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು. ಆದರೆ ಆಮ್ಲಾ 167 ಇನ್ನಿಂಗ್ಸ್‌ಗಳಲ್ಲೇ 27 ಶತಕ ಪೂರೈಸಿದ್ದಾರೆ.

Hashim Amla breaks Virat Kohli record
Author
Port Elizabeth, First Published Jan 21, 2019, 10:41 AM IST

ಪೋರ್ಟ್‌ ಎಲೆಜಿಬೆತ್‌(ಜ.21): ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿಯ ಮತ್ತೊಂದು ದಾಖಲೆಯನ್ನು ದ.ಆಫ್ರಿಕಾದ ಬ್ಯಾಟಿಂಗ್‌ ತಾರೆ ಹಾಶೀಂ ಆಮ್ಲಾ ಮುರಿದಿದ್ದಾರೆ.

ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 108 ರನ್‌ ಗಳಿಸಿದ ಆಮ್ಲಾ, ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 27 ಶತಕ ಬಾರಿಸಿದ ದಾಖಲೆ ಬರೆದರು. ಕೊಹ್ಲಿ ಈ ಸಾಧನೆ ಮಾಡಲು 169 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು. ಆದರೆ ಆಮ್ಲಾ 167 ಇನ್ನಿಂಗ್ಸ್‌ಗಳಲ್ಲೇ 27 ಶತಕ ಪೂರೈಸಿದ್ದಾರೆ. ಕೊಹ್ಲಿಗೂ ಮುನ್ನ ಸಚಿನ್‌ ತೆಂಡುಲ್ಕರ್‌ ಹೆಸರಲ್ಲಿ ದಾಖಲೆ ಇತ್ತು. ಸಚಿನ್‌ 254 ಇನ್ನಿಂಗ್ಸ್‌ಗಳಲ್ಲಿ 27ನೇ ಶತಕದ ಮೈಲಿಗಲ್ಲು ತಲುಪಿದ್ದರು.

ಬರೋಬ್ಬರಿ 15 ತಿಂಗಳ ಬಳಿಕ ಶತಕ ಸಿಡಿಸಿದ ಆಮ್ಲಾ ಹೋರಾಟ ಇದೇ ಮೊದಲ ಬಾರಿಗೆ ವ್ಯರ್ಥವಾಯಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಮುನ್ನಡೆ ಕಾಯ್ದುಕೊಂಡಿದೆ. ಇದೇ ಮೊದಲ ಬಾರಿಗೆ ಆಮ್ಲಾ ಶತಕ ಸಿಡಿಸಿದ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ಸೋತಂತಾಗಿದೆ. 

Follow Us:
Download App:
  • android
  • ios