ಇಂದೋರ್ ಟೆಸ್ಟ್ ಆರಂಭಕ್ಕೂ ಮುನ್ನ ಪಿಚ್ ಬಗ್ಗೆ ವಿಶ್ಲೇಷಣೆ ಮಾಡುವಾಗ ಈ ಪಿಚ್'ನಲ್ಲಿ ಹೆಚ್ಚೆಂದರೆ ಮೂರುವರೆ ದಿನಗಳಲ್ಲಿ ಆಟ ಮುಗಿಯುವ ಸಾಧ್ಯತೆಗಳಿವೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದರು.
ನವದೆಹಲಿ(ಅ.11): ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇಂದೋರ್ ಪಿಚ್ ಬಗ್ಗೆ ನೀಡಿದ್ದ ಹೇಳಿಕೆಯೀಗ ನಿಜವಾಗಿದೆ.
ಇಂದೋರ್ ಟೆಸ್ಟ್ ಆರಂಭಕ್ಕೂ ಮುನ್ನ ಪಿಚ್ ಬಗ್ಗೆ ವಿಶ್ಲೇಷಣೆ ಮಾಡುವಾಗ ಈ ಪಿಚ್'ನಲ್ಲಿ ಹೆಚ್ಚೆಂದರೆ ಮೂರುವರೆ ದಿನಗಳಲ್ಲಿ ಆಟ ಮುಗಿಯುವ ಸಾಧ್ಯತೆಗಳಿವೆ ಎಂದಿದ್ದರು.
ಭಾರತದಲ್ಲಿ ಇತ್ತೀಚೆಗೆ ನಿರ್ಮಿಸುತ್ತಿರುವ ಪಿಚ್'ಗಳು ಪ್ರಶ್ನಸುವಂತ ಪರಿಸ್ಥಿತಿ ಸೃಷ್ಟಿಸಿದೆ ಎಂದು ಟರ್ಭನೇಟರ್ ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಇಂದೋರ್ ಟೆಸ್ಟ್ ಕೇವಲ ನಾಲ್ಕು ದಿನಗಳೊಳಗಾಗಿ ಮುಕ್ತಾಯವಾಗುವ ಮೂಲಕ ಭಜ್ಜಿ ಭವಿಷ್ಯ ನಿಜವಾಗಿದೆ.
ಮೂರೂ ಟೆಸ್ಟ್'ಗಳಲ್ಲಿ ಭಾರತೀಯ ಸ್ಪಿನ್ನರ್'ಗಳೇ ಮೇಲುಗೈ ಸಾಧಿಸಿದ್ದಾರೆ. ಕೊನೆಯ ಟೆಸ್ಟ್'ನಲ್ಲಂತೂ ಅಶ್ವಿನ್ 13 ವಿಕೆಟ್ ಪಡೆದು ಮಿಂಚಿದರು.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರು ಟೆಸ್ಟ್'ಗಳಲ್ಲೂ ಟೀಂ ಇಂಡಿಯಾ ಜಯಭೇರಿ ಬಾರಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿಕೊಂ
