ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿರುವ ಬೆನ್ನಲ್ಲೇ, ಪಂಜಾಬಿನ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುದ್ದಿ ಬಂದಿದೆ. ಆದರೆ, ಸುದ್ದಿ ಹರಡುವ ಮುನ್ನವೇ ಸುದ್ದಿಯನ್ನು ಹರ್ಭಜನ್ ನಿರಾಕರಿಸಿದ್ದಾರೆ.
ಮುಂಬೈ (ಡಿ. 24): ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿರುವ ಬೆನ್ನಲ್ಲೇ, ಪಂಜಾಬಿನ ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುದ್ದಿ ಬಂದಿದೆ. ಆದರೆ, ಸುದ್ದಿ ಹರಡುವ ಮುನ್ನವೇ ಸುದ್ದಿಯನ್ನು ಹರ್ಭಜನ್ ನಿರಾಕರಿಸಿದ್ದಾರೆ.
ಪಂಜಾಬ್ ಸಿಎಂ ಸ್ಥಾನದ ಮೇಲೆ ಕಣ್ಣಿಟಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಜಲಂಧರ್ನಲ್ಲಿ ಜನಿಸಿ ವಿಶ್ವಖ್ಯಾತಿ ಪಡೆದಿರುವ ಕ್ರಿಕೆಟರ್ ಹರ್ಭಜನ್ ಅವರನ್ನು ರಾಜಕೀಯಕ್ಕೆ ತರಲು ಯತ್ನಿಸಿದ್ದಾರೆ. ಹರ್ಭಜನ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಜಲಂಧರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ' ಎಂದು ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಭಜನ್ ನನ್ನ ಗಮನ ಏನಿದ್ದರೂ ಕ್ರಿಕೆಟ್ ಮೇಲೆ ಮಾತ್ರ ಇದೆ, ರಾಜಕೀಯಕ್ಕೆ ಎಂಟ್ರಿ ಕೊಡುತ್ತಿಲ್ಲ, ಯಾವುದೇ ಪಕ್ಷ ಸೇರುತ್ತಿಲ್ಲ, ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿಲ್ಲ. ಸದ್ಯ ಪಂಜಾಬ್ ಪರ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ಅಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
