ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟ್'ನ್ನು ಸಹಾಯಾರ್ಥ ದೇಣಿಗೆಯಾಗಿ ಅಫ್ರೀದಿಗೆ ನೀಡಿದ್ದರು.
ಬೆಂಗಳೂರು(ಅ.28): ಮಾನವೀಯತೆಗೆ ದೇಶ, ಧರ್ಮ, ಗಡಿ, ಯಾವುದೂ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಹರ್ಭಜನ್ ಸಿಂಗ್ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರೀದಿಗೆ ಮಾಡಿರುವ ಸಹಾಯವೇ ಸಾಕ್ಷಿ.
ಹೌದು, ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾಗಿ ಕಾದಾಡುವ ಭಾರತ-ಪಾಕಿಸ್ತಾನ ತಂಡದ ಆಟಗಾರರ ಮೈದಾನದ ಹೊರಗೇ ಅಷ್ಟೇ ಸ್ನೇಹಿತರು ಎನ್ನುವುದಕ್ಕೆ ಮತ್ತೊಂದು ನಿದರ್ಶನ ನಮ್ಮ ಮುಂದಿದೆ.
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರೀದಿ ತಮ್ಮ ದೇಶದ ಬಡ ಜನರ ಸಹಾಯಕ್ಕಾಗಿ ನಡೆಸುತ್ತಿರುವ ಫೌಂಡೇಶನ್'ಗೆ ಹರ್ಭಜನ್ ಸಿಂಗ್ ನೆರವು ನೀಡುವ ಮೂಲಕ ಅಫ್ರೀದಿ ಕೆಲಸಕ್ಕೆ ಬೆಂಬಲ ಸೂಚಿದ್ದಾರೆ.
ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹಸ್ತಾಕ್ಷರ ಹೊಂದಿರುವ ಬ್ಯಾಟ್'ನ್ನು ಸಹಾಯಾರ್ಥ ದೇಣಿಗೆಯಾಗಿ ಅಫ್ರೀದಿಗೆ ನೀಡಿದ್ದರು.
ಕ್ರಿಕೆಟಿಗ ಈ ರೀತಿಯ ಸಹಾಯ-ಸಹಕಾರಗಳನ್ನು ನೋಡಿದರೆ ಮಾನವೀಯತೆಗೆ ಯಾವುದೂ ಅಡ್ಡಿಯಾಗಲಾರದು ಎನ್ನುವುದು ಸಾಭೀತಾದಂತಾಗಿದೆ.
