ಈಗ ಎಂಟಿವಿಯಲ್ಲಿ ಪ್ರಸಾರವಾಗುವ 'ರೋಡಿಸ್' ರಿಯಾಲಿಟಿ ಶೋನ 14ನೇ ಸೀಸನ್ ನಲ್ಲಿ ಭಜ್ಜಿ ಕಾಣಿಸಿಕೊಳ್ಳಲಿದ್ದಾರೆ. 'ರೋಡಿಸ್ ರೈಸಿಂಗ್' ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ನೇಹಾ ಧೂಪಿಯಾ ಹಾಗೂ ಹರ್ಭಜನ್ ಸಿಂಗ್ ಆಯ್ಕೆಯಾಗಿದ್ದಾರೆ.
ನವದೆಹಲಿ(ನ.11): ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕಿರುತೆರೆಗೆ ರೀ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ 'ಮಝಾಕ್ ಮಝಾಕ್ ಮೆ' ಅನ್ನೋ ಕಾರ್ಯಕ್ರಮವೊಂದಕ್ಕೆ ಹರ್ಭಜನ್ ತೀರ್ಪುಗಾರರಾಗಿದ್ದರು.
ಈಗ ಎಂಟಿವಿಯಲ್ಲಿ ಪ್ರಸಾರವಾಗುವ 'ರೋಡಿಸ್' ರಿಯಾಲಿಟಿ ಶೋನ 14ನೇ ಸೀಸನ್ ನಲ್ಲಿ ಭಜ್ಜಿ ಕಾಣಿಸಿಕೊಳ್ಳಲಿದ್ದಾರೆ. 'ರೋಡಿಸ್ ರೈಸಿಂಗ್' ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ನೇಹಾ ಧೂಪಿಯಾ ಹಾಗೂ ಹರ್ಭಜನ್ ಸಿಂಗ್ ಆಯ್ಕೆಯಾಗಿದ್ದಾರೆ.
ರೋಡೀಸ್ ಅತ್ಯಂತ ಜನಪ್ರಿಯ ಕಾರ್ಯಕ್ರಮ, ಇದರಲ್ಲಿ ಸಾಹಸ, ಪರಿಶ್ರಮ, ಧೈರ್ಯ ಎಲ್ಲವೂ ಇದೆ, ಹಾಗಾಗಿ ಜಡ್ಜ್ ಆಗಲು ಒಪ್ಪಿಕೊಂಡೆ ಅಂತಾ ಹರ್ಭಜನ್ ತಿಳಿಸಿದ್ದಾರೆ. ತಮ್ಮ ರೋಡೀಸ್ ಪ್ರಯಾಣದ ಆರಂಭಕ್ಕಾಗಿ ಉತ್ಸುಕತೆಯಿಂದಿದ್ದೇನೆ ಅಂತಾ ಹೇಳಿದ್ದಾರೆ.