.ಅವರು ಕೋಚ್ ಆಗಿದ್ದ ಅವಧಿಯಲ್ಲಿ ಲಂಕಾ 3-೦ಯಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಜಯಿಸಿತ್ತು
ಕೊಲಂಬೊ(ಜೂ.24): ಇತ್ತೀಚೇಗಷ್ಟೇ ಮುಕ್ತಾಯವಾದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದರಿಂದ ಬೇಸತ್ತು ತಂಡದ ಪ್ರಧಾನ ಕೋಚ್ ಸ್ಥಾನವನ್ನು ಗ್ರಹಾಂ ಫೋರ್ಡ್ ತ್ಯಜಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ 56 ವರ್ಷ ವಯಸ್ಸಿನ ಫೋರ್ಡ್ ಲಂಕಾ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದರು.ಅವರು ಕೋಚ್ ಆಗಿದ್ದ ಅವಧಿಯಲ್ಲಿ ಲಂಕಾ 3-೦ಯಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಜಯಿಸಿತ್ತು. ಆದರೆ 2016ರ ಟಿ2೦ ವಿಶ್ವಕಪ್‌ನ ಮೊದಲ ಸುತ್ತಿನಿಂದ ಹೊರಬಿದ್ದಿದ್ದ ಲಂಕಾ, ವರ್ಷದ ಆರಂಭದಲ್ಲಿ ಕೈಗೊಂಡಿದ್ದ ಆಫ್ರಿಕಾ ಪ್ರವಾಸದಲ್ಲಿ 3-೦ ಅಂತರದಲ್ಲಿ ಟೆಸ್ಟ್ ಹಾಗೂ 5-೦ ಅಂತರದಲ್ಲಿ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು.
