ಪರಶುರಾಮ್ ವೇಗದ ಬೌಲಿಂಗ್ ಹಾಗೂ ಆಕ್ರಮಣಕಾರಿ ಬ್ಯಾಟ್ಸ್’ಮನ್ ಆಗಿ ಗುರುತಿಸಿಕೊಂಡಿದ್ದ. ಸಿಂದಗಿ ಐಪಿಎಲ್ ಟೂರ್ನಿಯಲ್ಲಿ ಟೀಂ ಸಿಂದಗಿ ವಾರಿಯರ್ಸ್ ತಂಡವನ್ನು ಮುನ್ನಡೆಸಿದ್ದ ವಾಗ್ಮೊರೆ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ. ಕೊಹ್ಲಿ ಶೈಲಿಯಲ್ಲಿಯೇ ಬ್ಯಾಟ್ ಬೀಸುತ್ತಿದ್ದ ವಾಗ್ಮೊರೆ ಫೀಲ್ಡಿಗೆ ಇಳಿದರೆ ಪ್ರೇಕ್ಷಕರು ಆತನನ್ನು ಕೊಹ್ಲಿ ಎಂದೇ ಸಂಬೋದಿಸುತ್ತಿದ್ದರು. 

ವಿಜಯಪುರ[ಜೂ.26]: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಗ್ಮೊರೆ ಒಬ್ಬ ಅಪ್ರತಿಮ ಕ್ರಿಕೆಟ್ ಆಟಗಾರನಾಗಿದ್ದ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಹೌದು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಎಸ್’ಐಟಿಯ ತನಿಖೆ ಎದುರಿಸುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾಗ್ಮೊರೆ ಕ್ರಿಕೆಟ್’ನಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಜತೆಗೆ ವಿರಾಟ್ ಕೊಹ್ಲಿ ಎಂದೇ ಖ್ಯಾತಿ ಗಳಿಸಿದ್ದ ಎನ್ನಲಾಗಿದೆ.

ಪರಶುರಾಮ್ ವೇಗದ ಬೌಲಿಂಗ್ ಹಾಗೂ ಆಕ್ರಮಣಕಾರಿ ಬ್ಯಾಟ್ಸ್’ಮನ್ ಆಗಿ ಗುರುತಿಸಿಕೊಂಡಿದ್ದ. ಸಿಂದಗಿ ಐಪಿಎಲ್ ಟೂರ್ನಿಯಲ್ಲಿ ಟೀಂ ಸಿಂದಗಿ ವಾರಿಯರ್ಸ್ ತಂಡವನ್ನು ಮುನ್ನಡೆಸಿದ್ದ ವಾಗ್ಮೊರೆ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ. ಕೊಹ್ಲಿ ಶೈಲಿಯಲ್ಲಿಯೇ ಬ್ಯಾಟ್ ಬೀಸುತ್ತಿದ್ದ ವಾಗ್ಮೊರೆ ಫೀಲ್ಡಿಗೆ ಇಳಿದರೆ ಪ್ರೇಕ್ಷಕರು ಆತನನ್ನು ಕೊಹ್ಲಿ ಎಂದೇ ಸಂಬೋದಿಸುತ್ತಿದ್ದರು. 

2017ರ ಸೆಪ್ಟೆಂಬರ್ 05ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ನಿವಾಸದೆದುರೇ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು. ಇದೀಗ ಎಸ್‘ಐಟಿ ಐವರು ಶಂಕಿತರನ್ನು ಬಂಧಿಸಿದ್ದು, ಪರಶುರಾಮ್ ವಾಗ್ಮೊರೆ ಎಂಬಾತನೆ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಉನ್ನತ ಮೂಲಗಳು ಖಚಿತ ಪಡಿಸಿವೆ