ಸಿಡ್ನಿ[ಆ.01]: ಆಸ್ಟ್ರೇಲಿಯಾದ ಕಲ್ಗೊರ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಹಾಫ್ ಮ್ಯಾರಥಾನ್ (21 ಕಿ.ಮೀ) ಓಟದಲ್ಲಿ ‘ಸ್ಟಾರ್ಮಿ’ ಹೆಸರಿನ ಶ್ವಾನವೊಂದು ಪಾಲ್ಗೊಂಡು ಎಲ್ಲರ ಗಮನ ಸೆಳೆದಿದೆ. 

1 ವರ್ಷ ವಯಸ್ಸಿನ ಈ ಶ್ವಾನವೂ ಸ್ಪರ್ಧಿಗಳ ಜತೆ ಓಡಿ, 2 ಗಂಟೆ 30 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿತು. ಆಯೋಜಕರು ‘ಸ್ಟಾರ್ಮಿ’ಗೆ ಪದಕ ಪ್ರದಾನ ಸಹ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಜುಲೈ 23ರಂದು ಆಯೋಜನೆಗೊಂಡಿದ್ದ ಹಾಫ್ ಮ್ಯಾರಥಾನ್’ನಲ್ಲಿ ಒಟ್ಟು 94 ಮಂದಿ ಪಾಲ್ಗೊಂಡಿದ್ದರು.