ಗುಡ್ ಬೈ 2018: ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳಿವು

ಟೀಂ ಇಂಡಿಯಾ ಕ್ರಿಕೆಟ್ 2018ರಲ್ಲಿ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಸೋಲಿನ ಕಹಿಯುಂಡರೆ, ಆಫ್ರಿಕಾ ನೆಲದಲ್ಲೇ ಏಕದಿನ ಸರಣಿ ಗೆದ್ದಿದ್ದು, ನಿದಾಸ್ ಟ್ರೋಫಿ, ಏಷ್ಯಾಕಪ್ ರೋಚಕ ಗೆಲುವುಗಳನ್ನು ಮರೆಯಲು ಸಾಧ್ಯವೇ ಇಲ್ಲ. 

2018ರಲ್ಲಿ ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳು ನಿಮ್ಮ ಮುಂದೆ..

Good Bye 2018 Team India Won Top 5 Series Victory in 2018

ಬೆಂಗಳೂರು[ಡಿ.31]: ಟೀಂ ಇಂಡಿಯಾ ಕ್ರಿಕೆಟ್ 2018ರಲ್ಲಿ ಸಾಕಷ್ಟು ಸಿಹಿ-ಕಹಿ ನೆನಪುಗಳನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಸೋಲಿನ ಕಹಿಯುಂಡರೆ, ಆಫ್ರಿಕಾ ನೆಲದಲ್ಲೇ ಏಕದಿನ ಸರಣಿ ಗೆದ್ದಿದ್ದು, ನಿದಾಸ್ ಟ್ರೋಫಿ, ಏಷ್ಯಾಕಪ್ ರೋಚಕ ಗೆಲುವುಗಳನ್ನು ಮರೆಯಲು ಸಾಧ್ಯವೇ ಇಲ್ಲ. 
2018ರಲ್ಲಿ ಟೀಂ ಇಂಡಿಯಾ ಜಯಿಸಿದ ಟಾಪ್ 5 ಸರಣಿಗಳು ನಿಮ್ಮ ಮುಂದೆ..

1. ದಕ್ಷಿಣ ಆಫ್ರಿಕಾ ವಿರುದ್ಧ 5-1 ಅಂತರದ ಏಕದಿನ ಸರಣಿ ಜಯ:

Good Bye 2018 Team India Won Top 5 Series Victory in 2018

ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ; ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದ ವಿರಾಟ್ ಬಾಯ್ಸ್

ಭಾರತ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಕೈಚೆಲ್ಲಿದ್ದ ಭಾರತ, ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 5-1 ಅಂತರದಲ್ಲಿ ಗೆದ್ದು ಹರಿಣಗಳನ್ನು ಬೇಟೆಯಾಡಿತು. ಡರ್ಬನ್, ಸೆಂಚುರಿಯನ್ ಹಾಗೂ ಕೇಪ್’ಟೌನ್ ಪಂದ್ಯವನ್ನು ಅನಾಯಾಸವಾಗಿ ಗೆದ್ದು 3-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಜೋಹಾನ್ಸ್’ಬರ್ಗ್’ನಲ್ಲಿ ನಡೆದ Pink ODIs ನಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 5 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿ ಕಮ್’ಬ್ಯಾಕ್ ಮಾಡಿತು. ಆದರೆ ಪೋರ್ಟ್ ಎಲಿಜಬೆತ್ ಹಾಗೂ ಸೆಂಚುರಿಯನ್ ಪಂದ್ಯಗಳನ್ನು ಜಯಿಸುವ ಮೂಲಕ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿತು.

2. ನಿದಾಸ್ ಟ್ರೋಫಿ ಗೆಲುವು: 

Good Bye 2018 Team India Won Top 5 Series Victory in 2018

ನಿದಾಸ್ ಟ್ರೋಫಿ: ರೋಚಕ ಗೆಲುವು ತಂದುಕೊಟ್ಟ ಕಾರ್ತಿಕ್

2018ರ ಟೀಂ ಇಂಡಿಯಾದ ಸ್ಮರಣೀಯ ಹಾಗೂ ರೋಚಕ ಗೆಲುವು ಎಂದರೆ ಅದು ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಟಿ20 ಸರಣಿ ಗೆಲುವು. ಭಾರತ, ಶ್ರೀಲಂಕಾ ಬಾಂಗ್ಲಾದೇಶ ತಂಡಗಳು ಭಾಗವಹಿಸಿದ್ದ ನಿದಾಸ್ ಟ್ರೋಫಿ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಕಪ್ ಎತ್ತಿ ಹಿಡಿದಿತ್ತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಆತಿಥೇಯ ಶ್ರೀಲಂಕಾ ಪ್ರಶಸ್ತಿ ಸುತ್ತು ಪ್ರವೇಶಿಸಲು ವಿಫಲವಾಗಿತ್ತು. ಬಾಂಗ್ಲಾದೇಶ ವಿರುದ್ಧ ಕೊಲಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕೊನೆಯ ಎಸೆತದಲ್ಲಿ 5 ರನ್’ಗಳ ಅವಶ್ಯಕತೆಯಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ರೋಚಕವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 

3. ಆಪ್ಘಾನ್ ಎದುರು ಏಕೈಕ ಟೆಸ್ಟ್ ಸರಣಿ ಗೆಲುವು: 

Good Bye 2018 Team India Won Top 5 Series Victory in 2018

ಇಂಡೋ-ಆಫ್ಘಾನ್ ಟೆಸ್ಟ್: ಎರಡೇ ದಿನಕ್ಕೆ ಆಟ ಮುಗಿಸಿದ ಆಫ್ಘಾನ್..!

ಭಾರತ-ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಿತ್ತು. ಐಸಿಸಿ ಟೆಸ್ಟ್ ಮಾನ್ಯತೆ ಪಡೆದ ಬಳಿಕ ಭಾರತದ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ ಆಫ್ಘಾನಿಸ್ತಾನ ಎರಡು ದಿನದಲ್ಲೇ ಸೋಲೊಪ್ಪಿಕೊಂಡಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಸಿಡಿಸಿ ಆಲೌಟ್ ಆಗಿತ್ತು. ಆದರೆ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 109 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 103 ರನ್‌ಗಳಿಗೆ ಆಲೌಟ್ ಆಗೋ ಮೂಲಕ ಸೋಲಿಗೆ ಶರಣಾಯಿತು. ಟ್ರೋಫಿ ಗೆದ್ದ ಬಳಿಕ ಭಾರತದ ನಾಯಕ ಅಜಿಂಕ್ಯ ರಹಾನೆ, ಫೋಟೋಗೆ ಫೋಸ್ ನೀಡಲು ಆಫ್ಘಾನಿಸ್ತಾನ ತಂಡವನ್ನೂ ಆಹ್ವಾನಿಸಿ ಕ್ರೀಡಾಸ್ಫೂರ್ತಿ ಮೆರೆದರು. 

4. ಏಷ್ಯಾಕಪ್ ಗೆಲುವು: 

Good Bye 2018 Team India Won Top 5 Series Victory in 2018

ಬಾಂಗ್ಲಾ ವಿರುದ್ಧ ರೋಚಕ ಗೆಲುವು-ಭಾರತಕ್ಕೆ 7ನೇ ಏಷ್ಯಾಕಪ್ ಕಿರೀಟ

ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಈ ಬಾರಿ ಯುನೈಟೆಡ್ ಅರಬ್ ಎಮಿರಾಟ್ಸ್’ನಲ್ಲಿ ಆಯೋಜನೆಗೊಂಡಿತ್ತು. ಒಟ್ಟು 6 ತಂಡಗಳು ಪಾಲ್ಗೊಂಡಿದ್ದ ಈ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ-ಬಾಂಗ್ಲಾದೇಶ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 223 ರನ್’ಗಳ ಗುರಿ ಬೆನ್ನತ್ತಿದ ಭಾರತ ಮತ್ತೊಮ್ಮೆ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶ ಮಣಿಸಿ ದಾಖಲೆಯ 7ನೇ ಬಾರಿಗೆ ಏಷ್ಯಾದ ಸಾಮ್ರಾಟನಾಗಿ ಹೊರಹೊಮ್ಮಿತು.

5. ವಿಂಡೀಸ್ ವೈಟ್’ವಾಷ್: 

Good Bye 2018 Team India Won Top 5 Series Victory in 2018

ವಿಂಡೀಸ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಸೋತು ಸುಣ್ಣವಾಯಿತು. ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲಿ ಇನ್ನಿಂಗ್ಸ್ ಹಾಗೂ 272 ರನ್’ಗಳ ಜಯ ಸಾಧಿಸಿದ್ದ ಭಾರತ, ಹೈದರಾಬಾದ್’ನಲ್ಲಿ ನಡೆದ 2ನೇ ಟೆಸ್ಟ್’ನಲ್ಲಿ 10 ವಿಕೆಟ್’ಗಳ ಜಯ ಸಾಧಿಸಿತ್ತು. ಇನ್ನು 5 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-1 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಇನ್ನು 3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಜಯಿಸಿತು.
 

Latest Videos
Follow Us:
Download App:
  • android
  • ios