ಕೆನಡಾ ಟಿ-20 ಆಡಲು ಸಜ್ಜಾಗಿರುವ ಸ್ಮಿತ್-ವಾರ್ನರ್ ಸಂಭಾವನೆ ಏಷ್ಟು?

Global T20 Canada How much will Steve Smith and David Warner earn?
Highlights

ಐಪಿಎಲ್ ಟೂರ್ನಿಯಲ್ಲಿ ಆಸಿಸ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ತಲಾ 12 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ ಇದೀಗ ಕೆನಡಾ ಟಿ-ಟ್ವೆಂಟಿ ಲೀಗ್ ಟೂರ್ನಿಯಲ್ಲಿ ಇವರ ಸಂಭಾವನೆ ಕೇಳಿದರೆ ನಿಮಗೂ ಅಚ್ಚರಿಯಾಗಲಿದೆ.

ಆಸ್ಟ್ರೇಲಿಯಾ(ಜೂನ್.10): ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ಕೆನಡಾ ಟಿ-ಟ್ವಿಂಟಿ ಲೀಗ್ ಆಡಲು ಸಜ್ಜಾಗಿದ್ದಾರೆ. 

ಒಂದು ವರ್ಷದ ನಿಷೇಧದಿಂದ ಅಂತಾರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ  ಸ್ಮಿತ್ ಹಾಗೂ ವಾರ್ನರ್‌ ಈ ಬಾರಿಯ ಐಪಿಎಲ್ ಪಂದ್ಯದಿಂದಲೂ ಹೊರಗುಳಿಯಬೇಕಾಯಿತು. ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ ಹಾಗೂ ವಾರ್ನರ್ ತಲಾ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೆನಡಾದಲ್ಲಿ ಆರಂಭವಾಗಲಿರುವ ಟಿ-ಟ್ವೆಂಟಿ ಲೀಗ್‌ನಲ್ಲಿ ಇವರ ಸಂಭಾವನೆ ತೀರಾ ಕಡಿಮೆ.

ಕೆನಾಡ ಟಿ20 ಲೀಗ್ ಟೂರ್ನಿಯಲ್ಲಿ ಆಡೋ ಸ್ಟೀವ್ ಸ್ಮಿತ್‌ ಸಂಭಾವನೆ 67.52 ಲಕ್ಷ ರೂಪಾಯಿ. ಇನ್ನು ಡೇವಿಡ್ ವಾರ್ನರ್ ಸಂಭಾವನೆ 60.76 ಲಕ್ಷ ರೂಪಾಯಿ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದ ಈ ಕ್ರಿಕೆಟಿಗರು ಇದೀಗ ಬಾಲ್ ಟ್ಯಾಂಪರ್‌ನಿಂದ ಸಂಭಾವನೆಯಲ್ಲೂ ಭಾರಿ ಇಳಿಕೆ ಕಂಡಿದ್ದಾರೆ.

loader