‘ಪ್ರಸ್ತುತ ಉಮೇಶ್ ಯಾದವ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವರ ಪ್ರದರ್ಶನದ ಗುಣಮಟ್ಟ ಹೆಚ್ಚುತ್ತಿದೆ. ತಮ್ಮ ವಯಸ್ಸಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ' ಎಂದು ಮೆಗ್ರಾತ್ ಕೊಂಡಾಡಿದ್ದಾರೆ.
ಮುಂಬೈ(ಜು.25): ಭಾರತದ ಸ್ಟಾರ್ ವೇಗಿ ಉಮೇಶ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೇನ್ ಮೆಗ್ರಾತ್ ಶ್ಲಾಘಿಸಿದ್ದಾರೆ.
‘ಪ್ರಸ್ತುತ ಉಮೇಶ್ ಯಾದವ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವರ ಪ್ರದರ್ಶನದ ಗುಣಮಟ್ಟ ಹೆಚ್ಚುತ್ತಿದೆ. ತಮ್ಮ ವಯಸ್ಸಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ' ಎಂದು ಮೆಗ್ರಾತ್ ಕೊಂಡಾಡಿದ್ದಾರೆ.
‘ವೇಗದ ಬೌಲರ್'ಗಳಿಗೆ ವಿಶ್ರಾಂತಿ ಅಗತ್ಯ. ವಿಶ್ರಾಂತಿ ಇಲ್ಲದೇ ವರ್ಷಪೂರ್ತಿ ಬೌಲಿಂಗ್ ಮಾಡಿದರೆ ಗಾಯದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ರಜೆ ಪಡೆದರೆ ಫಿಟ್'ನೆಸ್ ಕಾಯ್ದುಕೊಳ್ಳಬಹುದು’ ಎಂದು ಮೆಗ್ರಾಥ್ ಅಭಿಪ್ರಾಯಪಟ್ಟಿದ್ದಾರೆ.