Asianet Suvarna News Asianet Suvarna News

ಪಂಜಾಬ್ ಸೋಲಿಸಿದ ಲಯನ್ಸ್ :ವ್ಯರ್ಥವಾಯಿತು ಆಮ್ಲಾ ಶತಕ

ಇಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ 190 ರನ್ ಗುರಿ ಬೆನ್ನಟ್ಟಿದ ಗುಜರಾತ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಡ್ವೇನ್ ಸ್ಮಿತ್ ಅರ್ಧಶತಕ ಸಿಡಿಸಿ ಮಿಂಚಿದರೆ, ಕಿಶನ್,ರೈನಾ ಹಾಗೂ ಕಾರ್ತಿಕ್ ಸಮಯೋಚಿತ ಬ್ಯಾಟಿಂಗ್ ತಂಡದ ಗೆಲುವಿಗೆ ನೆರವಾಯಿತು.

GL win by six wickets

ಮೊಹಾಲಿ(ಮೇ.07):ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್‌ನ ಪ್ಲೇ-ಆಫ್ ಆಸೆಗೆ ಪ್ರಬಲವಾಗಿ ಪೆಟ್ಟು ನೀಡಿದೆ.

ಇಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ 190 ರನ್ ಗುರಿ ಬೆನ್ನಟ್ಟಿದ ಗುಜರಾತ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಡ್ವೇನ್ ಸ್ಮಿತ್ ಅರ್ಧಶತಕ ಸಿಡಿಸಿ ಮಿಂಚಿದರೆ, ಕಿಶನ್,ರೈನಾ ಹಾಗೂ ಕಾರ್ತಿಕ್ ಸಮಯೋಚಿತ ಬ್ಯಾಟಿಂಗ್ ತಂಡದ ಗೆಲುವಿಗೆ ನೆರವಾಯಿತು. ಗುಜರಾತ್ ಇನ್ನೂ 2 ಎಸೆತ ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಪಂಜಾಬ್ ಸದ್ಯ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಸಿ 10 ಅಂಕ ಪಡೆದಿದ್ದು, ಪ್ಲೇ-ಆಫ್ ಏರಲು ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದು, ಉಳಿದ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್‌ಗೆ ಹಾಶೀಂ ಆಮ್ಲಾ ಶತಕದಾಟ ಸಹಕಾರಿಯಾಯಿತು. ಈ ಆವೃತ್ತಿಯಲ್ಲಿ ಆಮ್ಲಾ 2ನೇ ಶತಕ ದಾಖಲಿಸಿದರು. ಕೇವಲ 60 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿದ ಅವರು 104 ರನ್ ಗಳಿಸಿದು. ಆಮ್ಲಾ ಹಾಗೂ ಮಾರ್ಷ್ ಆಟದಿಂದಾಗಿ ಪಂಜಾಬ್ ಬೃಹತ್ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರ್

ಪಂಜಾಬ್ 20 ಓವರ್‌ಗಳಲ್ಲಿ 189/3 (ಆಮ್ಲಾ 104, ಮಾರ್ಷ್ 58, ಕುಲ್ಕರ್ಣಿ 1-24),

ಗುಜರಾತ್ 19.4 ಓವರ್‌ಗಳಲ್ಲಿ 192/4 (ಸ್ಮಿತ್ 74, ರೈನಾ 39, ಸಂದೀಪ್ 2-29)

ಪಂದ್ಯ ಶ್ರೇಷ್ಠ: ಡಿ.ಸ್ಮಿತ್

Follow Us:
Download App:
  • android
  • ios