ಜೂನಿಯರ್ ತಂಡಕ್ಕೆ ಆದಂತೆ ವೀಸಾ ನೀಡುವಿಕೆ ವಿಚಾರದಲ್ಲಿ ತಕರಾರು ಉಂಟಾದರೆ, ಹಿರಿಯರ ತಂಡವನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಎಫ್ಐಎಚ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.     

ಕರಾಚಿ(ಸೆ.23): ತನ್ನ ದೇಶದ ಆಟಗಾರರಿಗೆ ಸುಲಭವಾಗಿ ವೀಸಾ ನೀಡಬೇಕು ಹಾಗೂಸೂಕ್ತ ಭದ್ರತೆಯೊದಗಿಸುವ ಭರವಸೆ ನೀಡಬೇಕು, ಇಲ್ಲವಾದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಬೆದರಿಕೆಯೊಡ್ಡಿದೆ.

ಈ ಕುರಿತು ಇತ್ತೀಚೆಗೆ ದುಬೈನಲ್ಲಿ ನಡೆದ ಸಭೆಯಲ್ಲಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್’ನ ಅಧ್ಯಕ್ಷ ನರೇಂದರ್ ಬಾತ್ರಾ ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಅಧ್ಯಕ್ಷ ಖಲೀದ್ ಖೋಕರ್ ತಿಳಿಸಿದ್ದಾರೆ.

ಜೂನಿಯರ್ ತಂಡಕ್ಕೆ ಆದಂತೆ ವೀಸಾ ನೀಡುವಿಕೆ ವಿಚಾರದಲ್ಲಿ ತಕರಾರು ಉಂಟಾದರೆ, ಹಿರಿಯರ ತಂಡವನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಎಫ್ಐಎಚ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.