Asianet Suvarna News Asianet Suvarna News

3ನೇ ಅಂಪೈರ್'ಗೆ ಪರಮಾಧಿಕಾರ ಸಿಗಲಿ

ಪಂದ್ಯದಲ್ಲಿ ಯಾವುದೇ ಆಟಗಾರ ತನ್ನ ವಿರುದ್ಧ ಬಂದ ಅಂಪೈರ್ ಮನವಿಯನ್ನು ಡಿಆರ್‌ಎಸ್ ಮೂಲಕ ಪರಾಮರ್ಶಿಸಲು ಮನವಿ ಮಾಡದಿದ್ದರೂ ಅನುಮಾನ ಬಂದ ಪ್ರಕರಣಗಳಲ್ಲಿ 3ನೇ ಅಂಪೈರ್ ಪ್ರಧಾನ ಪಾತ್ರ ವಹಿಸಲಿ.

- ಸಚಿನ್ ತೆಂಡೂಲ್ಕರ್

Give third umpire power to intervene even without referral

ನವದೆಹಲಿ(ನ.15): ಕ್ರಿಕೆಟ್ ಪಂದ್ಯದಲ್ಲಿ ಯಾವುದೇ ಆಟಗಾರನ ಬಗ್ಗೆ ಅಂಪೈರ್ ತಪ್ಪು ನಿರ್ಣಯ ನೀಡಿದಲ್ಲಿ, ಪಂದ್ಯದ ಮೂರನೇ ಅಂಪೈರ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಸೂಕ್ತವಾದ ನಿರ್ಧಾರವನ್ನು ಪ್ರಕಟಿಸುವಂಥ ವ್ಯವಸ್ಥೆ ಜಾರಿಗೊಳ್ಳಬೇಕೆಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಗ್ರಹಿಸಿದ್ದಾರೆ.

ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಅಳವಡಿಕೆಗೆ ಭಾರತೀಯ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಮನಸ್ಸು ಮಾಡಿದ್ದನ್ನು ಸ್ವಾಗತಿಸಿರುವ ಅವರು, ಪಂದ್ಯದಲ್ಲಿ ಯಾವುದೇ ಆಟಗಾರ ತನ್ನ ವಿರುದ್ಧ ಬಂದ ಅಂಪೈರ್ ಮನವಿಯನ್ನು ಡಿಆರ್‌ಎಸ್ ಮೂಲಕ ಪರಾಮರ್ಶಿಸಲು ಮನವಿ ಮಾಡದಿದ್ದರೂ ಅನುಮಾನ ಬಂದ ಪ್ರಕರಣಗಳಲ್ಲಿ 3ನೇ ಅಂಪೈರ್ ಪ್ರಧಾನ ಪಾತ್ರ ವಹಿಸಲಿ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios