ಕೋಲ್ಕತ್ತಾ(ಸೆ.27): ಕನ್ನಡಿಗ ಕೆ.ಎಲ್.ರಾಹುಲ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಸ್ಟೋಟಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. 

Add Asianetnews Kannada as a Preferred SourcegooglePreferred

ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲೇ ಗಾಯಗೊಂಡ ರಾಹುಲ್ ಬದಲಿಗೆ ಶಿಖರ್ ಧವನ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು, ಈ ಹಿನ್ನಲೆಯಲ್ಲಿ ಕೋಚ್ ಅನಿಲ್ ಕುಂಬ್ಳೆ ತಂಡಕ್ಕೆ ಮತ್ತೊಬ್ಬ ಒಪನರ್ ಅವಶ್ಯಕತೆ ಇರುವ ಮನಗೊಂಡು ಗೌತಮ್ ಗಂಭೀರ್ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸೆಪ್ಟೆಂಬರ್ 30 ರಿಂದ ಆರಂಭವಾಗಲಿರುವ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ. ಗೌತಮ್ ಗಂಭೀರ್ ಈ ಹಿಂದೆ 2013ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಪಂದ್ಯವಾಗಿಡಿದ್ದರು, ಆ ನಂತರ ದೇಶಿಯ ಪಂದ್ಯಗಳು ಮತ್ತು ಐಪಿಎಲ್ ನಲ್ಲಿ ಆಡಿದ್ದು ಬಿಟ್ಟರೆ ಟೀಮ್ ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. 

ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ನ್ಯಾಷಿನಲ್ ಕ್ರಿಕೆಟ್ ಅಸೋಷಿಯೆಷನ್ ನಲ್ಲಿ ಗೌತಮ್ ಗಂಭೀರ್ ಫಿಟ್ನೆಸ್ ಟೆಸ್ಟ್ ನಡೆಯಲಿದ್ದು, ಇದರಲ್ಲಿ ಗೌತಿ ಪಾಸ್ ಆದರೆ ಟೀಮ್ ಇಂಡಿಯಾದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭ ಒಗಿಸುವ ಇರಾದೆ ಹೊಂದಿದ್ದಾರೆ.