ನಿತೀಶ್ ರಾಣಾ, ಉನ್ಮುಕ್ತ್ ಚಾಂದ್ ಅವರಂತಹ ಯುವ ಪ್ರತಿಭೆಗಳು ಭಾಸ್ಕರ್ ಗರಡಿಯಲ್ಲಿ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಗಂಭೀರ್ ಗುರುತರ ಆರೋಪ ಮಾಡಿದ್ದರು.

ನವದೆಹಲಿ(ಜೂ.17): ಅನುಭವಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ನ ನಾಲ್ಕು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ದೆಹಲಿ ರಣಜಿ ತಂಡದ ಕೋಚ್ ಕೆ.ಪಿ.ಭಾಸ್ಕರ್ ಯುವ ಪ್ರತಿಭೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ವಿಜಯ್ ಹಜಾರೆ ಟೂರ್ನಿ ವೇಳೆ ಗಂಭೀರ್ ಆರೋಪಿಸಿದ್ದರು. ನಿತೀಶ್ ರಾಣಾ, ಉನ್ಮುಕ್ತ್ ಚಾಂದ್ ಅವರಂತಹ ಯುವ ಪ್ರತಿಭೆಗಳು ಭಾಸ್ಕರ್ ಗರಡಿಯಲ್ಲಿ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಗಂಭೀರ್ ಗುರುತರ ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಕ್ರಿಕೆಟ್ ಸಂಸ್ಥೆ ಈ ಪ್ರಕರಣದ ವಿಚಾರಣೆಗಾಗಿ ಮಾಜಿ ಕ್ರಿಕೆಟಿಗ ಮದನ್‌ಲಾಲ್ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಿಸಿತ್ತು.

ಈ ಸಂಬಂಧ ತನಿಖೆ ನಡೆಸಿದ ಸಮಿತಿ, ಈ ಪ್ರಕರಣದಲ್ಲಿ ಗಂಭೀರ್ ಅವರು ತಪ್ಪು ಎಸಗಿರುವುದು ಸಾಬೀತಾಗಿದೆ. ಅಲ್ಲದೇ ಗಂಭೀರ್ ನಡವಳಿಕೆ ಅಸಂಜಮಸ ಎಂದು ಪರಿಗಣಿಸಿ ಗಂಭೀರ್ ಅವರನ್ನು 4 ಪಂದ್ಯಗಳಿಂದ ಹೊರಗಿಡಲಾಗಿದೆ.