ಸಂಸ್ಥೆಯ ಋಣ ತೀರಿಸುವ ದೃಷ್ಟಿಯಿಂದ ಈ ಸಾಲಿನಲ್ಲಿ ಸಂಭಾವನೆ ಇಲ್ಲದೆ ಆಡಲು ತಾವು ನಿರ್ಧರಿಸಿದ್ದಾಗಿ ಜಾಫರ್ ಹೇಳಿದ್ದಾರೆ. 2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಜಾಫರ್ ವಿದರ್ಭ ಪರ 500ಕ್ಕೂ ಹೆಚ್ಚು ರನ್ ಬಾರಿಸಿದ್ದರು.

ಮುಂಬೈ(ಜ.09): 2017-18ರ ರಣಜಿ ಟ್ರೋಫಿಯಲ್ಲಿ ಸಂಭಾವನೆ ಇಲ್ಲದೇ ಆಡಿದ್ದಾಗಿ ವಿದರ್ಭ ತಂಡದ ಅನುಭವಿ ಬ್ಯಾಟ್ಸ್‌'ಮನ್ ವಾಸೀಂ ಜಾಫರ್ ಸ್ಪಷ್ಟಪಡಿಸಿದ್ದಾರೆ.

ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಫರ್, 2016-17ರಲ್ಲಿ ವಿದರ್ಭದೊಂದಿಗೆ ಗುತ್ತಿಗೆಗೆ ಸಹಿ ಹಾಕಿದ್ದರು. ಆದರೆ ಗಾಯದ ಸಮಸ್ಯೆಯಿಂದ ಅವರು ರಣಜಿ ಟ್ರೋಫಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಬಳಿಕ ಸೀಮಿತ ಓವರ್ ಟೂರ್ನಿಯಲ್ಲಿ ಜಾಫರ್‌'ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೂ ವಿದರ್ಭ ಕ್ರಿಕೆಟ್ ಸಂಸ್ಥೆ ಜಾಫರ್‌ಗೆ ಸಂಭಾವನೆ ಪಾವತಿಸಿತ್ತು.

ಸಂಸ್ಥೆಯ ಋಣ ತೀರಿಸುವ ದೃಷ್ಟಿಯಿಂದ ಈ ಸಾಲಿನಲ್ಲಿ ಸಂಭಾವನೆ ಇಲ್ಲದೆ ಆಡಲು ತಾವು ನಿರ್ಧರಿಸಿದ್ದಾಗಿ ಜಾಫರ್ ಹೇಳಿದ್ದಾರೆ. 2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಜಾಫರ್ ವಿದರ್ಭ ಪರ 500ಕ್ಕೂ ಹೆಚ್ಚು ರನ್ ಬಾರಿಸಿದ್ದರು.

ಜಾಫರ್ ಅವರ ನಿರ್ಧಾರವನ್ನು ಡೆಲ್ಲಿ ಕ್ರಿಕೆಟಿಗ ಗೌತಮ್ ಗಂಭೀರ್ ಕೊಂಡಾಡಿದ್ದಾರೆ.

Scroll to load tweet…

ವಿದರ್ಭ ತಂಡ ಡೆಲ್ಲಿ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಚೊಚ್ಚಲ ಬಾರಿಗೆ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.