ಇಂದಿನಿಂದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಂ

French open Grand Slam starts from today
Highlights

ವರ್ಷದ 2ನೇ ಹಾಗೂ ಏಕೈಕ ಮಣ್ಣಿನ ಅಂಕಣದ ಗ್ರ್ಯಾಂಡ್‌ಸ್ಲಾಂ ಟೆನಿಸ್ ಪಂದ್ಯಾವಳಿ ಫ್ರೆಂಚ್ ಓಪನ್ ಇಂದಿನಿಂದ ಆರಂಭಗೊಳ್ಳಲಿದೆ. 2 ವಾರಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 16 ಗ್ರ್ಯಾಂಡ್ ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್ ನಡಾಲ್ 11ನೇ ಫ್ರೆಂಚ್ ಮೇಲೆ ಕಣ್ಣಿಟ್ಟರೆ, 23 ಗ್ರ್ಯಾಂಡ್‌ಸ್ಲಾಂಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್ ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂನಲ್ಲಿ ಆಡುತ್ತಿದ್ದು, ಅವರ ಮೇಲೆ ಎಲ್ಲರ ಕಣ್ಣಿದೆ.

ದಾಖಲೆಯ 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್ ಫೆಡರರ್ ಹಾಗೂ ಮಾಜಿ ನಂ.1 ಬ್ರಿಟನ್‌ನ ಆ್ಯಂಡಿ ಮರ್ರೆ ಈ ಬಾರಿ ಪಂದ್ಯಾವಳಿಗೆ ಗೈರಾಗಲಿದ್ದಾರೆ. ಈ ಬಾರಿಯೂ ನಡಾಲ್, ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದು, ನೋವಾಕ್ ಜೋಕೋವಿಚ್, ಅಲೆಕ್ಸಾಂಡರ್ ಜ್ವೆರೆವ್, ಸ್ಟಾನಿಸ್ಲಾಸ್ ವಾವ್ರಿಂಕಾರಿಂದ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಮಣ್ಣಿನ ಅಂಕಣದಲ್ಲಿ ನಡಾಲ್ ಪ್ರಚಂಡ ಲಯದಲ್ಲಿದ್ದು ಮೊಂಟೆ ಕಾರ್ಲೊ, ಬಾರ್ಸಿ ಲೋನಾದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸತತ 50 ಸೆಟ್ ಜಯದ ದಾಖಲೆ ಬರೆದಿದ್ದರು. ಕಳೆದ ವಾರವಷ್ಟೇ 8ನೇ ಬಾರಿಗೆ ರೋಮ್ ಮಾಸ್ಟರ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ನಡಾಲ್, ಫ್ರೆಂಚ್ ಓಪನ್ ಉಳಿಸಿಕೊಳ್ಳಲು ಸನ್ನದ್ಧರಾಗಿದ್ದಾರೆ. ಮೊದಲ ಸುತ್ತಿನಲ್ಲಿ ನಡಾಲ್‌ಗೆ ಉಕ್ರೇನ್‌ನ ಅಲ್ಸೆಕಾಂಡರ್ ಡೊಲ್ಗೊಪೊಲೊವ್ ಎದುರಾಗಲಿದ್ದಾರೆ.

ತಾಯಿಯಾದ ಬಳಿಕ ಟೆನಿಸ್‌ಗೆ ಮರಳಿದ ಸೆರೆನಾ ಕೇವಲ 4 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಪೂರ್ಣ ಫಿಟ್ನೆಸ್ ಸಾಧಿಸಿದ್ದಾರೇ ಎನ್ನುವ ಬಗ್ಗೆ ಖಚಿತತೆ ಇಲ್ಲದಿದ್ದರೂ, ಅವರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಿಮೊನಾ ಹಾಲೆಪ್, ಕ್ಯಾರೊಲಿನ್ ವೋಜ್ನಿಯಾಕಿ, ಹಾಲಿ ಚಾಂಪಿಯನ್ ಎಲೆನಾ ಒಸ್ಟಪೆನ್ಕೊ ಹಾಗೂ ಮರಿಯಾ ಶರಪೋವಾ ಪ್ರಶಸ್ತಿ ಕಣದಲ್ಲಿರುವ ಪ್ರಮುಖರೆನಿಸಿದ್ದಾರೆ. ಸೆರೆನಾಗೆ ಮೊದಲ ಸುತ್ತಲ್ಲಿ, ಚೆಕ್ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೊವಾ ಎದುರಾಗಲಿದ್ದಾರೆ.

ಸೆರೆನಾ ಒಂದೊಮ್ಮೆ ಪ್ರಶಸ್ತಿ ಜಯಿಸಿದರೆ, ಮಾರ್ಗರೆಟ್ ಕೋರ್ಟ್(24) ಅತಿಹೆಚ್ಚು ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲುವು ದಾಖಲೆಯನ್ನು ಸರಿಗಟ್ಟಲಿದ್ದಾರೆ.

loader