French Open 2023: ಪ್ರಿ ಕ್ವಾರ್ಟರ್ಗೇರಿದ ನೋವಾಕ್ ಜೋಕೋವಿಚ್
ಫ್ರೆಂಚ್ ಓಪನ್ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದ ನೋವಾಕ್ ಜೋಕೋವಿಚ್
23ನೇ ಗ್ರ್ಯಾನ್ ಸ್ಲಾಂ ಗೆಲ್ಲಲು ತುದಿಗಾಲಲ್ಲಿ ನಿಂತ ಜೋಕೋವಿಚ್
ರುಬ್ಲೆವ್, ಪೆಗುಲಾಗೆ ಸೋಲಿನ ಶಾಕ್
ಪ್ಯಾರಿಸ್(ಜೂ.03): ದಾಖಲೆಯ 23ನೇ ಟೆನಿಸ್ ಗ್ರ್ಯಾನ್ ಸ್ಲಾಂ ಗೆಲ್ಲಲು ತುದಿಗಾಲಿನಲ್ಲಿ ನಿಂತಿರುವ ಸರ್ಬಿಯಾದ ನೋವಾಕ್ ಜೋಕೋವಿಚ್, ಫ್ರೆಂಚ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮೂರನೇ ಸುತ್ತಿನಲ್ಲಿ ಜೋಕೋವಿಚ್, ಸ್ಪೇನ್‌ನ ಡೇವಿಡೋವಿಚ್ ಫೊಕಿನಾ ವಿರುದ್ದ 7-6, 7-6, 6-2ರಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಈ ವರ್ಷದ 2ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಅರೈನಾ ಸಬಲೆಂಕಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಸೋತು ನಿರಾಸೆ ಅನುಭವಿಸಿದ್ದಾರೆ.
ಚೊಚ್ಚಲ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ಬೆಲಾರಸ್‌ನ ಸಬಲೆಂಕಾ ಶುಕ್ರವಾರ 3ನೇ ಸುತ್ತಿನಲ್ಲಿ ರಷ್ಯಾದ ಕಮಿಲ್ಲಾ ರಖಿಮೋವಾ ವಿರುದ್ಧ 6-2, 6-2 ಸುಲಭ ಗೆಲುವು ಸಾಧಿಸಿದರು. ಇದೇ ವೇಳೆ ಟೂರ್ನಿಯ 9ನೇ ಶ್ರೇಯಾಂಕಿತೆ, ರಷ್ಯಾದ ದರಿಯಾ ಕಸತ್ಕೀನಾ ಅಮೆರಿಕದ ಪೇಟನ್ ಸ್ಟೀನ್ಸ್‌ರ್ ವಿರುದ್ಧ 6-0, 6-1 ಜಯಗಳಿಸಿದರು. ಆದರೆ ಅಮೆರಿಕದ ಪೆಗುಲಾ ಬೆಲ್ಜಿಯಂನ ಎಲೈಸ್ ಮೆರ್ಟನ್ಸ್ ವಿರುದ್ಧ 1-6, 3-6ರಲ್ಲಿ ಪರಾಭವಗೊಂಡರು.
ರುಬ್ಲೆವ್ಗೆ ಆಘಾತ: 7ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್ ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ ಸೋತು 3ನೇ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದರು. ಮೊದಲೆರಡು ಸೆಟ್ಗಳಲ್ಲಿ ರುಬ್ಲೆವ್ ಗೆದ್ದರೂ ಪಂದ್ಯ ತನ್ನದಾಗಿಸಿಕೊಳ್ಳಲು ವಿಶ್ವ ನಂ.48 ಲೊರೆಂಜೊ ಯಶಸ್ವಿಯಾದರು. 11ನೇ ಶ್ರೇಯಾಂಕಿತ ರಷ್ಯಾದ ಕರೇನ್ ಕಚನೋವ್ ಆಸ್ಪ್ರೇಲಿಯಾದ ಕೊಕ್ಕಿನಾಕಿಸ್ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್ಗೇರಿದರು. ಕಳೆದ ಬಾರಿ ರನ್ನರ್-ಅಪ್, 4ನೇ ಶ್ರೇಯಾಂಕಿತ ನಾರ್ವೆಯ ಕ್ಯಾಸ್ಪರ್ ರುಡ್ ಇಟಲಿಯ ಜೆಪ್ಪೀರಿ ವಿರುದ್ಧ ಗೆದ್ದು 3ನೇ ಸುತ್ತಿಗೇರಿದರು.
ಥಾಯ್ಲೆಂಡ್ ಓಪನ್: ಸೆಮೀಸ್‌ಗೆ ಲಕ್ಷ್ಯ ಸೇನ್ ಲಗ್ಗೆ
ಬ್ಯಾಂಕಾಕ್: ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ತಾರಾ ಶಟ್ಲರ್ ಲಕ್ಷ್ಯ ಸೇನ್ ತಮ್ಮ ಎಂದಿನ ಲಯಕ್ಕೆ ಮರಳಿದಂತಿದ್ದು, ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಚೊಚ್ಚಲ ಬಾರಿ ಬಿಡಬ್ಲ್ಯುಎಫ್ ವಿಶ್ವ ಟೂರ್ 500 ವಿಭಾಗದಲ್ಲಿ ಕ್ವಾರ್ಟರ್ಗೇರಿದ್ದ ಕಿರಣ್ ಜಾಜ್‌ರ್ ಸೋತು ಹೊರಬಿದ್ದಿದ್ದಾರೆ.
Wrestlers Protest: ಬ್ರಿಜ್ ಕಿರುಕುಳದ ವಿವರ ಎಳೆಎಳೆಯಾಗಿ ಬಿಚ್ಚಿಟ್ಟ ಕುಸ್ತಿಪಟುಗಳು!
ಶುಕ್ರವಾರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವ ನಂ.23 ಸೇನ್ ಮಲೇಷ್ಯಾದ ಲಿಯಾಂಗ್ ಜುನ್ ವಿರುದ್ಧ 21-19, 21-11 ನೇರ ಗೇಮ್ಗಳಲ್ಲಿ ಜಯಿಸಿದರು. ಇದರೊಂದಿಗೆ ಸೇನ್ ಈ ಋುತುವಿನಲ್ಲಿ ಮೊದಲ ಬಾರಿ ಸೆಮಿಫೈನಲ್ ಹಂತಕ್ಕೆ ಕಾಲಿಟ್ಟರು. ಅಂತಿಮ 4ರ ಘಟ್ಟದಲ್ಲಿ ಸೇನ್‌ಗೆ ಚೀನಾದ ಲು ಗ್ವಾಂಗ್ ಝು/ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ಸವಾಲು ಎದುರಾಗಲಿದೆ. ಇದೇ ವೇಳೆ ಕಿರಣ್ ಫ್ರಾನ್ಸ್‌ನ ಜೂನಿಯರ್ ಪೊಪೊವ್ ವಿರುದ್ಧ 16-21, 17-21 ನೇರ ಗೇಮ್ಗಳಲ್ಲಿ ಪರಾಭವಗೊಂಡರು.