ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಹಾಲೆಪ್ ’ನಾನು ಕಳೆದ ವರ್ಷ ಮಾಡಿದ ತಪ್ಪನ್ನು ಈ ಬಾರಿ ಮರುಕಳಿಸದಂತೆ ನೋಡಿಕೊಂಡೆ, ಗ್ರಾಂಡ್’ಸ್ಲಾಂ ಪ್ರಶಸ್ತಿ ಗೆಲ್ಲುವುದು ನನ್ನ ಕನಸಾಗಿತ್ತು. ಪ್ಯಾರಿಸ್’ನಲ್ಲಿ ಈ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು 26 ವರ್ಷದ ರೊಮೇನಿಯಾದ ಆಟಗಾರ್ತಿ ಹೇಳಿದ್ದಾರೆ.

ಪ್ಯಾರಿಸ್[ಜೂ.09]: ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತ ವಿಶ್ವದ ನಂ.1 ಶ್ರೇಯಾಂಕಿತೆ ರೊಮೇನಿಯಾದ ಸಿಮೊನಾ ಹಾಲೆಪ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಮಣಿಸಿ 2018ನೇ ಸಾಲಿನ ಮಹಿಳಾ ಸಿಂಗಲ್ಸ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಚೊಚ್ಚಲ ಗ್ರಾಂಡ್’ಸ್ಲಾಂಗೆ ಮುತ್ತಿಕ್ಕಿ ಸಂಭ್ರಮಿಸಿದರು.

ಆರಂಭದಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ 6-3 ಅಂಕಗಳಿಂದ ಸೆಟ್ ತಮ್ಮದಾಗಿಸಿಕೊಂಡರು. ಆದರೆ ಬಳಿಕ ಭರ್ಜರಿ ಕಮ್’ಬ್ಯಾಕ್ ಮಾಡಿದ ಹಾಲೆಪ್ 6-4, 6-1 ಸೆಟ್’ಗಳನ್ನು ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಕಳೆದ ಮೂರು ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದ ಹಾಲಿಪ್ ಕೊನೆಗೂ ಟ್ರೋಫಿ ಗೆದ್ದು ನಿಟ್ಟುಸಿರುಬಿಟ್ಟರು.

Scroll to load tweet…