ಒಂದೇ ದಿನ ಒಬ್ಬರಲ್ಲ, ಇಬ್ಬರಲ್ಲ, ನಾಲ್ವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಅಷ್ಟಕ್ಕೂ ಹೀಗೆ ದಿಢೀರ್ ವಿದಾಯ ಹೇಳಿದವರು ಯಾರು? ಇಲ್ಲಿದೆ ವಿವರ.
ಗಯಾನ(ನ.18): ಅಂತಾರಾಷ್ಟ್ರೀಯ ಕ್ರಿಕೆಟಿಗೆ ಒಂದೇ ದಿನ ನಾಲ್ವರು ವಿದಾಯ ಹೇಳಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 4 ಪಂದ್ಯಗಳನ್ನ ಸೋತ ಐರ್ಲೆಂಡ್ ತಂಡ ಗೆಲುವಿಲ್ಲದೆ ನಿರಾಸೆ ಅನುಭವಿಸಿದೆ. ಹೀಗಾಗಿ ಐರ್ಲೆಂಡ್‌ನ ನಾಲ್ವರು ಕ್ರಿಕೆಟ್ ಆಟಗಾರ್ತಿಯರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಸಹೋದರಿಯರಾದ ಇಸಾಬೆಲ್ ಜೋಯ್ಸ್ ಹಾಗೂ ಸೆಸಿಲಿಯಾ ಜೋಯ್ಸ್ ಜೊತೆಗೆ ಕ್ಲಾರೆ ಶಿಲ್ಲಿಂಗ್ಟನ್, ಸಿಯಾರ ಮೆಟ್‌ಕಫೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದ ಬಳಿಕ ಈ ನಾಲ್ವರು ಕ್ರಿಕೆಟ್ ಆಟಗಾರ್ತಿಯರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಇಸಾಬೆಲ್ ಜೋಯ್ಸ್ ಹಾಗೂ ಸೆಸಿಲಿಯಾ ಜೋಯ್ಸ್ ಪಂದ್ಯದ ಬಳಿಕ ವಿದಾಯ ಘೋಷಿಸಿದರು. ಆದರೆ ಟಿ20 ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ವಿದಾಯದ ಮಾತನ್ನ ತಳ್ಳಿ ಹಾಕಿದ್ದ ಕ್ಲಾರೆ ಶಿಲ್ಲಿಂಗ್ಟನ್ ಹಾಗೂ ಸಿಯಾರ ಮೆಟ್‌ಕಫೆ, ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ವಿದಾಯ ಹೇಳಿದರು. ಹೀಗಾಗಿ ಒಂದೇ ದಿನ ನಾಲ್ವರು ಆಟಗಾರ್ತಿಯರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
