Asianet Suvarna News Asianet Suvarna News

ಕಂಚಿನ ‘ಸಾಕ್ಷಿ’ಗೆ ನಾಲ್ವರು ಗುರುಗಳು?

Four men claim to be Sakshi Malik coach
  • Facebook
  • Twitter
  • Whatsapp

ಚಂಡೀಗಡ(ಆ.02): ರಿಯೊ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ ಅವ​ರಿಗೆ ಕುಸ್ತಿ ತರ​ಬೇ​ತು​ದಾ​ರ​ರಾ​ಗಿದ್ದು ನಾವೇ ಎಂದು ನಾಲ್ವರು ಕೋಚ್‌​ಗಳು ಪರ​ಸ್ಪರ ಪೈಪೋ​ಟಿಗೆ ಮುಂದಾ​ಗಿ​ದ್ದಾ​ರೆಂದು ಟೈಮ್ಸ್‌ ಆಫ್‌ ಇಂಡಿಯಾ ತಿಳಿ​ಸಿದೆ.

ರಿಯೊ​ದಲ್ಲಿ ಕಂಚು ಗೆದ್ದ ಸಾಕ್ಷಿ​ಯ​ವರ ಕೋಚ್‌ ಅವ​ರನ್ನೂ ಸನ್ಮಾ​ನಿಸಿ, ರೂ. 10 ಲಕ್ಷ ನಗದು ಪುರ​ಸ್ಕಾರ ನೀಡಲು ಹರ್ಯಾಣ ಸರ್ಕಾರ ನಿರ್ಧ​ರಿ​ಸಿ​ದೆ. ಈ ಹಿನ್ನೆ​ಲೆ​ಯಲ್ಲಿ ಸಾಕ್ಷಿ ಯಶ​ಸ್ಸಿಗೇ ತಾವೇ ಕಾರಣ ಎಂದು ಹೇಳು​ತ್ತಿ​ರುವ ಈ ನಾಲ್ವರೂ, ತಲಾ ರೂ. 10 ಲಕ್ಷ ನೀಡಿ ಸನ್ಮಾ​ನಿಸಿ ಎಂದು ಹರ್ಯಾಣ ಸರ್ಕಾ​ರ​ವನ್ನು ಆಗ್ರ​ಹಿ​ಸಿ​ದ್ದಾರೆ.

ಆದರೆ, ಸರ್ಕಾ​ರವು ಸಾಕ್ಷಿ ಸೂಚಿ​ಸುವ ಒಬ್ಬ​ರನ್ನು ಮಾತ್ರ ಸನ್ಮಾ​ನಿ​ಸು​ವು​ದಾಗಿ ಹೇಳಿದೆ.

Follow Us:
Download App:
  • android
  • ios