ಮಾಸ್ಕೊ(ಆ.02): ರಷ್ಯಾದಲ್ಲಿ ನಡೆಯುತ್ತಿರುವ ಮಹಮ್ಮದ್‌ ಸಲಾಮ್‌ ಸ್ಮರಣಾರ್ಥ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಪಂದ್ಯಾವಳಿಯಲ್ಲಿ ಭಾರತ ಪದಕದತ್ತ ಮುನ್ನಗ್ಗುತ್ತಿದ್ದಾರೆ.  ನಿರೀಕ್ಷಿತ ಪ್ರದರ್ಶನ ನೀಡಿರುವ ಭಾರತದ ನಾಲ್ವರು ಬಾಕ್ಸಿಂಗ್ ಪಟುಗಳು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

 

ಪೂಜಾ ರಾಣಿ (75 ಕೆ.ಜಿ), ಲೊವ್ಲಿನಾ ಬೊರ್ಗೊಹೈನ್‌ (69 ಕೆ.ಜಿ) ಇಂಡಿಯಾ ಓಪನ್‌ ಸ್ವರ್ಣ ವಿಜೇತೆ ನೀರಜ್‌ (57 ಕೆಜಿ) ಹಾಗೂ ಮಾಜಿ ವಿಶ್ವ ಕಿರಿಯರ ಕೂಟದ ಕಂಚು ವಿಜೇತೆ ಜಾನಿ (60 ಕೆಜಿ) ಅಂತಿಮ 4ರ ಸುತ್ತಿಗೆ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಆಶೀಶ್‌ (52 ಕೆ.ಜಿ), ಗೌರವ್‌ (56 ಕೆ.ಜಿ), ಗೋವಿಂದ್‌ (49 ಕೆ.ಜಿ) ಹಾಗೂ ಸಂಜೀತ್‌ (91 ಕೆ.ಜಿ) ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಟೂರ್ನಿಯಲ್ಲಿ 21 ದೇಶಗಳ 200ಕ್ಕೂ ಹೆಚ್ಚು ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ.