Asianet Suvarna News Asianet Suvarna News

ತಂದೆಯಾದ ಬಳಿಕ ಗೆಳತಿಯೊಂದಿಗೆ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಶ್ಚಿತಾರ್ಥ!

ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ತಮ್ಮ ಬಹುಕಾಲದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ ಬಳಿಕ ಇದೀಗ 2ನೇ ಮದುವೆಗೆ ಸಿದ್ದತೆ ನಡೆಸಿದ್ದಾರೆ. 

Former South Africa captain Graeme Smith gets engaged
Author
Bengaluru, First Published Oct 31, 2018, 6:45 PM IST
  • Facebook
  • Twitter
  • Whatsapp

ಜೋಹಾನ್ಸ್‌ಬರ್ಗ್(ಅ.31): ಸೌತ್ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ತಮ್ಮ ಬಹುಕಾಲದ ಗೆಳತಿ ರೊಮಿ ಲ್ಯಾನ್‌ಫ್ರಾಂಶಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2014ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಗ್ರೇಮ್ ಸ್ಮಿತ್ ಇದೀಗ 37ರ ಹರೆಯದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಗ್ರೇಮ್ ಸ್ಮಿತ್ ಹಾಗೂ ರೊಮಿ ಲ್ಯಾನ್‌ಫ್ರಾಂಶಿ  ಪ್ರೀತಿ ಆರಂಭಗೊಂಡಿದ್ದು 2014ರಲ್ಲಿ. 2016ರಲ್ಲಿ ಗ್ರೇಮ್ ಸ್ಮಿತ್ ಗಂಡು ಮಗುವಿನ ತಂದೆಯಾಗಿದ್ದಾರೆ. ಇದೀಗ ಅಪ್ಪನಾಗಿ 2 ವರ್ಷಗಳ ಬಳಿಕ ಸ್ಮಿತ್ ಬಹುಕಾಲದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

 

2011ರಲ್ಲಿ ಗ್ರೇಮ್ ಸ್ಮಿತ್, ಖ್ಯಾತ ಪಾಪ್ ಸಿಂಗರ್ ಮಾರ್ಗನ್ ಡೇನ್ ಅವರನ್ನ ವಿವಾಹವಾಗಿದ್ದರು. ಮೊದಲ ಪತ್ನಿ ಜೊತೆ 3 ವರ್ಷ ಸಂಸಾರ ನಡೆಸಿದ ಸ್ಮಿತ್ 2 ಮಕ್ಕಳ ತಂದೆಯಾಗಿದ್ದರು. ಬಳಿಕ 2014ರಲ್ಲಿ ಮೊದಲ ಪತ್ನಿಗೆ ವಿಚ್ಚೇದನ ನೀಡಿ, ರೊಮಿ ಜೊತೆ ಗೆಳೆತನ ಆರಂಭಿಸಿದರು. ಸ್ಮಿತ್ ಒಟ್ಟು 3 ಮಕ್ಕಳ ತಂದೆಯಾಗಿದ್ದಾರೆ. 
 

Follow Us:
Download App:
  • android
  • ios