ಚೆನ್ನೈ(ಆ.16): ಭಾರತದ ಮಾಜಿ ಕ್ರಿಕೆಟಿಗ ಹಾಗೂ ರಾಷ್ಟ್ರೀಯ ಆಯ್ಕೆಗಾರ ವಿ.ಬಿ.ಚಂದ್ರಶೇಖರ್‌ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. 

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆಯ ವೇಳೆ ತಿಳಿಸಿದ್ದಾರೆ.  

ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ರನ್; ದಿಗ್ಗಜರ ದಾಖಲೆ ಪುಡಿ ಪುಡಿ!

1988ರಿಂದ 1990ರ ವರೆಗೂ ಭಾರತ ಪರ 7 ಏಕದಿನ ಪಂದ್ಯಗಳನ್ನಾಡಿದ್ದ ಅವರು, ತಮಿಳುನಾಡು ಪರ 81 ಪ್ರ.ದರ್ಜೆ ಪಂದ್ಯಗಳಲ್ಲಿ 4999 ರನ್‌ ಗಳಿಸಿದ್ದರು. ದೇಸಿ ಕ್ರಿಕೆಟ್‌ನ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, 2008ರ ಐಪಿಎಲ್‌ ಹರಾಜಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಧೋನಿ, ರೈನಾರನ್ನು ಖರೀದಿಸುವಲ್ಲಿ ಚಂದ್ರಶೇಖರ್‌ ಪಾತ್ರವಿತ್ತು ಎನ್ನುವುದು ವಿಶೇಷ.

ವಿ.ಬಿ.ಚಂದ್ರಶೇಖರ್‌ ನಿಧನಕ್ಕೆ ಅನಿಲ್ ಕುಂಬ್ಳೆ ಸೇರಿದಂತೆ ಟೀಂ ಇಂಡಿಯಾ ಹಿರಿ ಕ್ರಿರಿಯ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.