ಹಾಗ್ ಕ್ರಿಕೆಟ್ ಜಗತ್ತಿನಿಂದ ನಿವೃತ್ತಿ ಪಡೆದ ಬಳಿಕ ಹಾಗೂ ತನ್ನ ವೈವಾಹಿಕ ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ನಾನು ಸಮುದ್ರಕ್ಕೆ ಹಾರಬೇಕು ಎನ್ನುವ ಆಲೋಚನೆ ಬಂದಿತ್ತು ಎಂದಿದ್ದಾರೆ .
ಸಿಡ್ನಿ(ನ.02): ಆಸ್ಟ್ರೇಲಿಯಾ ಮಾಜಿ ಆಟಗಾರ ಬ್ರ್ಯಾಡ್ ಹಾಗ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಹೀಗೆಂದು ಸ್ವತಃ ಹಾಗ್ ತಮ್ಮ 'ದ ರಾಂಗ್ ಅನ್' ಎನ್ನುವ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಹಾಗ್ ಕ್ರಿಕೆಟ್ ಜಗತ್ತಿನಿಂದ ನಿವೃತ್ತಿ ಪಡೆದ ಬಳಿಕ ಹಾಗೂ ತನ್ನ ವೈವಾಹಿಕ ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ನಾನು ಸಮುದ್ರಕ್ಕೆ ಹಾರಬೇಕು ಎನ್ನುವ ಆಲೋಚನೆ ಬಂದಿತ್ತು ಎಂದಿದ್ದಾರೆ .
ನೀರಿಗೆ ಬಿದ್ದ ಮೇಲೆ ಬದುಕಿದರೆ ಉಳಿದುಕೊಳ್ಳುತ್ತೇನೆ, ಇಲ್ಲದಿದ್ದರೆ ಸಾಯುತ್ತೇನೆ. ಎಲ್ಲವನ್ನೂ ನನ್ನ ಅದೃಷ್ಟದ ಮೇಲೆ ಬಿಟ್ಟುಬಿಡುತ್ತೇನೆ ಎಂಬ ಯೋಚನೆ ಬಂದಿತ್ತು. ಇದೇ ರೀತಿ ನಾಲ್ಕು ಬಾರಿ ಯೋಚಿಸಿದ್ದೆ ಆದರೆ ನನಗೆ ಹಾರುವ ಧೈರ್ಯ ಬರಲಿಲ್ಲ ಎಂದಿದ್ದಾರೆ.
