ಸಿಡ್ನಿ[ಮಾ.27]: ಆಸ್ಟ್ರೇಲಿಯಾ ಮಾಜಿ ಟೆಸ್ಟ್ ಕ್ರಿಕೆಟಿಗ, ಕೋಚ್ ಹಾಗೂ ವೀಕ್ಷಕ ವಿವರಣೆಗಾರರಾಗಿ ಖ್ಯಾತರಾಗಿದ್ದ ಬ್ರೂಸ್ ಯಾರ್ಡ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್’ನೊಂದಿಗೆ ಸೆಣೆಸುತ್ತಿದ್ದ ಯಾರ್ಡ್ಲಿ ತಮ್ಮ 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

30ನೇ ವಯಸ್ಸಿಗೆ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಯಾರ್ಡ್ಲಿ, 33 ಟೆಸ್ಟ್ ಪಂದ್ಯಗಳನ್ನಾಡಿ 126 ವಿಕೆಟ್ ಕಬಳಿಸಿದ್ದರು. ಮಧ್ಯಮವೇಗಿಯಾಗಿ ತಂಡ ಸೇರಿದ್ದ ಯಾರ್ಡ್ಲಿ ಆ ಬಳಿಕ ಆಫ್ ಸ್ಪಿನ್ನರ್ ಆಗಿ ಬದಲಾಗಿದ್ದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಯಾರ್ಡ್ಲಿ 344 ವಿಕೆಟ್ ಕಬಳಿಸಿ ಮಿಂಚಿದ್ದರು. 

ಇನ್ನು 1996ರಿಂದ 1998ರ ಅವಧಿಯಲ್ಲಿ ಶ್ರೀಲಂಕಾ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುತ್ತಯ್ಯಾ ಮುರುಳೀಧರನ್ ಬೌಲಿಂಗ್ ಶೈಲಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಯಾರ್ಡ್ಲಿ ನಿಧನಕ್ಕೆ ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕರ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.