Asianet Suvarna News Asianet Suvarna News

ಫಿಫಾ ವಿಶ್ವಕಪ್; ಭಾರತಕ್ಕೆ ಫುಟ್ಬಾಲ್ ದಿಗ್ಗಜರ ಭೇಟಿ!

17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 6ರಿಂದ 28ರವರೆಗೆ ನಡೆಯಲಿದೆ.

Football Greats to Visit India Ahead of Tournament
  • Facebook
  • Twitter
  • Whatsapp

ನವದೆಹಲಿ(ಮಾ.22): ಇದೇ ವರ್ಷ ಅಕ್ಟೋಬರ್‌'ನಲ್ಲಿ ನಡೆಯಲಿರುವ 17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್‌'ಗೂ ಮುನ್ನ ಭಾರತಕ್ಕೆ ಫುಟ್ಬಾಲ್ ದಿಗ್ಗಜರು ಭೇಟಿ ನೀಡಲಿದ್ದಾರೆ ಎಂದು ಫಿಫಾ ಕಾರ್ಯಕ್ರಮಗಳ ಮುಖ್ಯಸ್ಥ ಜ್ಯಾಮಿ ಯಾರ್ಜಾ ಹೇಳಿದ್ದಾರೆ.

‘‘ಮೇ ತಿಂಗಳಲ್ಲಿ 20 ವರ್ಷದೊಳಗಿನವರ ಫಿಫಾ ವಿಶ್ವಕಪ್‌'ಗೆ ಆತಿಥ್ಯ ವಹಿಸಲಿರುವ ದಕ್ಷಿಣ ಕೊರಿಯಾಕ್ಕೆ ಇತ್ತೀಚೆಗಷ್ಟೇ ಅರ್ಜೆಂಟೀನಾದ ಡಿಗೋ ಮರಡೋನಾ ಹಾಗೂ ಫಾಬ್ಲೊ ಐಮರ್ ಭೇಟಿ ನೀಡಿ, ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು".

ಅದೇ ರೀತಿ ಭಾರತಕ್ಕೂ ವಿಶ್ವ ಶ್ರೇಷ್ಠ ಫುಟ್ಬಾಲಿಗರು ಬರಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಪ್ರಚಾರ ನಡೆಸಲಿರುವ ದಿಗ್ಗಜರು, ಕೆಲ ಪಂದ್ಯಗಳಿಗೂ ಸಾಕ್ಷಿಯಾಗಲಿದ್ದಾರೆ. ಆದರೆ ಯಾರನ್ನು ಆಹ್ವಾನಿಸುವುದು ಎಂದು ಇನ್ನೂ ತೀರ್ಮಾನಿಸಿಲ್ಲ ಎಂದು ಯಾರ್ಜಾ ತಿಳಿಸಿದ್ದಾರೆ.

17 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 6ರಿಂದ 28ರವರೆಗೆ ನಡೆಯಲಿದೆ.

 

Follow Us:
Download App:
  • android
  • ios