ಫಿಫಾ ವಿಶ್ವಕಪ್: ಫ್ರಾನ್ಸ್ ಅಭಿಮಾನಿಗಳ ಕ್ರೇಜ್’ನ್ನೊಮ್ಮೆ ನೀವು ನೋಡಿ
2018ನೇ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಫ್ರಾನ್ಸ್ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳ ಪಡೆ ರಷ್ಯಾ ಟೂರ್ ಕೈಗೊಂಡಿದೆ.
2018ನೇ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಫ್ರಾನ್ಸ್ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳ ಪಡೆ ರಷ್ಯಾ ಟೂರ್ ಕೈಗೊಂಡಿದೆ. ’ಲೆಸ್ ಇರೆಸ್ಟಿಬ್ಲಿಸ್ ಫ್ರಾನ್ಸಿಸ್’ ಹೆಸರಿನ ಬಸ್’ದಲ್ಲಿ ಪ್ಯಾರಿಸ್’ನಿಂದ ಹೊರಟು ರಸ್ತೆ ಮಾರ್ಗವಾಗಿಯೇ ಜರ್ಮನಿ, ಪೊಲ್ಯಾಂಡ್ ಹಾಗೂ ಬೆಲಾರಸ್ ಮೂಲಕ ರಷ್ಯಾ ತಲುಪಿದ್ದಾರೆ. ಬಸ್’ನಲ್ಲಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು ಮೂರು ಸಾವಿರ ಕಿಲೋ ಮೀಟರ್ ಪ್ರಯಾಣದ ಬಳಿಕ ಫ್ರಾನ್ಸ್ ಅಭಿಮಾನಿಗಳ ತಂಡ ರಷ್ಯಾ ತಲುಪಿದೆ.