ಈ ವರ್ಷ ಮೊದಲ ಬಾರಿಗೆ ಬೆಂಗ್ಳೂರಲ್ಲಿ ಮಿನಿ ಒಲಿಂಪಿಕ್ಸ್
13 ಮತ್ತು 15 ವರ್ಷದೊಳಗಿನ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಬಹುದಾಗಿದೆ. ಈ ಕೂಟಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿನ ವಿವಿಧ ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಯುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದಾಗಿ ಈ ಕ್ರೀಡಾ ಕೂಟ ನಡೆಸಲಾಗುತ್ತಿದೆ.
ಬೆಂಗಳೂರು[ಜ.05] ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಿನಿ ಒಲಿಂಪಿಕ್ ಗೇಮ್ಸ್ ಆಯೋಜಿಸುವುದಾಗಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಶುಕ್ರವಾರ ಪ್ರಕಟಿಸಿದೆ. 2019ರ ಮೇ ಹಾಗೂ ಜೂನ್ ತಿಂಗಳಲ್ಲಿ ಈ ಕೂಡ ನಡೆಸುವುದಾಗಿ ಕೆಒಎ ಹೇಳಿದೆ.
13 ಮತ್ತು 15 ವರ್ಷದೊಳಗಿನ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಬಹುದಾಗಿದೆ. ಈ ಕೂಟಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿನ ವಿವಿಧ ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ. ಯುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದಾಗಿ ಈ ಕ್ರೀಡಾ ಕೂಟ ನಡೆಸಲಾಗುತ್ತಿದೆ.
ಮೊದಲ ಬಾರಿ ಕರ್ನಾಟಕದಲ್ಲಿ ಇಂತಹ ಕೂಟವನ್ನು ಆಯೋಜಿಸುತ್ತಿರುವುದರಿಂದ ಸೀಮಿತ ಕ್ರೀಡೆಗಳನ್ನು ಆಡಿಸಲಾಗುವುದು. ಈ ಕೂಟ ಯಶಸ್ವಿಯಾದ ಬಳಿಕ ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡೆಗಳನ್ನು ಇದರಲ್ಲಿ ಸೇರಿಸಲಾಗುವ ಯೋಚನೆ ಇದೆ. ಎಲ್ಲಾ ಕ್ರೀಡೆಗಳನ್ನು ಮೊದಲ ಬಾರಿಯ ಕೂಟದಲ್ಲಿ ಆಯೋಜಿಸಿ ಗೊಂದಲ ಮಾಡಿಕೊಳ್ಳುವುದಕ್ಕಿಂತ ಸೀಮಿತ ಕ್ರೀಡೆಗಳಿಗೆ ಮಾತ್ರ ಅವಕಾಶ ಕಲ್ಪಿಸುವುದು ಸೂಕ್ತವಾಗಿದೆ. ಯಾವ ಕ್ರೀಡೆಗಳು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಕೆಒಎ ಕಾರ್ಯದರ್ಶಿ ಅನಂತರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು.