ಕ್ರಿಕೆಟ್ ಅಭಿಮಾನಿಗಳಲ್ಲಿ ಶೇ.61ರಷ್ಟು ಪುರುಷರಾದರೆ, ಶೇ.39ರಷ್ಟುಮಹಿಳೆಯರು ಎನ್ನಲಾಗಿದೆ. ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಕ್ರಿಕೆಟ್‌ಗೆ ಶೇ.91ರಷ್ಟುಜನಪ್ರಿಯತೆ ಇದೆ. 

ದುಬೈ[ಜೂ.28]: ಕ್ರಿಕೆಟ್‌ಗೆ ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದು, ಈ ಪೈಕಿ ಶೇ.90ಕ್ಕಿಂತ ಹೆಚ್ಚು ಅಭಿಮಾನಿಗಳು ಏಷ್ಯಾ ಉಪಖಂಡದಲ್ಲಿದ್ದಾರೆ (ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ) ಎಂದು ಐಸಿಸಿ ಸಮೀಕ್ಷೆ ವರದಿ ಹೇಳಿದೆ. 

ಕ್ರಿಕೆಟ್ ಅಭಿಮಾನಿಗಳಲ್ಲಿ ಶೇ.61ರಷ್ಟು ಪುರುಷರಾದರೆ, ಶೇ.39ರಷ್ಟುಮಹಿಳೆಯರು ಎನ್ನಲಾಗಿದೆ. ಇದೇ ವೇಳೆ ಟೆಸ್ಟ್‌ ಕ್ರಿಕೆಟ್‌ಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಕ್ರಿಕೆಟ್‌ಗೆ ಶೇ.91ರಷ್ಟುಜನಪ್ರಿಯತೆ ಇದೆ. 

Scroll to load tweet…

ಪಾಕಿಸ್ತಾನದಲ್ಲಿ ಟಿ20 ಮಾದರಿಯನ್ನು ಶೇ.98ರಷ್ಟುಅಭಿಮಾನಿಗಳು ಇಷ್ಟಪಡುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಶೇ.92ರಷ್ಟುಅಭಿಮಾನಿಗಳು ಟಿ20 ಕ್ರಿಕೆಟ್‌ನತ್ತ ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.