ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ತಂಡದ ವಿರುದ್ಧ ಭಾರತ 7-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ಇದರ ಜತೆಗೆ ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

ಭುವನೇಶ್ವರ[ಜೂ.15]: ಎಫ್‌ಐಎಚ್‌ ಹಾಕಿ ಸೀರೀಸ್‌ ಫೈನಲ್ಸ್‌ ಟೂರ್ನಿಯ ಫೈನಲ್‌ಗೆ ಭಾರತ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌ ವಿರುದ್ಧ 7-2 ಗೋಲುಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದಿದೆ.

Add Asianetnews Kannada as a Preferred SourcegooglePreferred

FIH ಹಾಕಿ ಫೈನಲ್ಸ್: ಭಾರತ-ಜಪಾನ್‌ ಸೆಮೀಸ್‌ ಫೈಟ್

ಏಷ್ಯನ್‌ ಗೇಮ್ಸ್‌ನಲ್ಲಿ ಸೋಲುಂಡು ನಿರಾಸೆಗೊಂಡಿದ್ದ ಭಾರತಕ್ಕೆ ಈ ಪಂದ್ಯ ಮಹತ್ವದೆನಿಸಿತ್ತು. ಪಂದ್ಯದ 2ನೇ ನಿಮಿಷದಲ್ಲೇ ಕೆಂಜಿ ಕಿಟಜಾಟೊ ಗೋಲು ಬಾರಿಸಿ ಜಪಾನ್‌ಗೆ ಮುನ್ನಡೆ ನೀಡಿದರು. ಆದರೆ 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿದ ಹರ್ಮನ್‌ಪ್ರೀತ್‌ ಸಮಬಲಕ್ಕೆ ಕಾರಣರಾದರು. 14ನೇ ನಿಮಿಷದಲ್ಲಿ ವರುಣ್‌ ಕುಮಾರ್‌ ಭಾರತಕ್ಕೆ 2-1 ಮುನ್ನಡೆ ಒದಗಿಸಿದರು. 20ನೇ ನಿಮಿಷದಲ್ಲಿ ಕೊಟಾ ವಟನಾಬೆ ಗೋಲು ಬಾರಿಸಿದ ಕಾರಣ ಜಪಾನ್‌ 2-2ರಲ್ಲಿ ಸಮಬಲ ಸಾಧಿಸಿತು. 23ನೇ ನಿಮಿಷದಲ್ಲಿ ರಮಣ್‌ದೀಪ್‌ ಭಾರತಕ್ಕೆ 3-2 ಮುನ್ನಡೆ ನೀಡಿದರು. ಬಳಿಕ ಭಾರತೀಯರನ್ನು ನಿಯಂತ್ರಿಸಲು ಜಪಾನ್‌ಗೆ ಸಾಧ್ಯವಾಗಲಿಲ್ಲ. 25ನೇ ನಿಮಿಷದಲ್ಲಿ ಹಾರ್ದಿಕ್‌, 37ನೇ ನಿಮಿಷದಲ್ಲಿ ರಮಣ್‌ದೀಪ್‌, 43ನೇ ನಿಮಿಷದಲ್ಲಿ ಗುರ್‌ಸಾಹಿಬ್‌ಜಿತ್‌, 47ನೇ ನಿಮಿಷದಲ್ಲಿ ವಿವೇಕ್‌ ಪ್ರಸಾದ್‌ ಗೋಲು ಗಳಿಸಿದರು.

Scroll to load tweet…

ಮತ್ತೊಂದು ಸೆಮೀಸ್‌ನಲ್ಲಿ ಅಮೆರಿಕ ವಿರುದ್ಧ ದ.ಆಫ್ರಿಕಾ 2-1 ಗೋಲುಗಳ ಗೆಲುವು ಸಾಧಿಸಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ-ದ.ಆಫ್ರಿಕಾ ಸೆಣಸಲಿವೆ.