ಫಿಫಾ ವಿಶ್ವಕಪ್: ಡೆನ್ಮಾರ್ಕ್’ಗೆ ಗೆಲುವು ತಂದಿತ್ತ ಪೌಲ್ಸೆನ್

FIFA World Cup 2018 Yussuf Poulsen Scores Winner As Denmark Beat Peru 1-0
Highlights

ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ, ದ್ವಿತೀಯಾರ್ಧದಲ್ಲಿ ಡೆನ್ಮಾರ್ಕ್ ವಿಭಿನ್ನ ತಂತ್ರಗಾರಿಕೆಯೊಂದಿಗೆ ಆಡಿತು. ದ್ವಿತೀಯಾರ್ಧ ಆರಂಭಗೊಂಡು 14ನೇ ನಿಮಿಷದಲ್ಲೇ
ಎರಿಕ್ಸನ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ಅದ್ಭುತವಾಗಿ ನಿಯಂತ್ರಣಕ್ಕೆ ಪಡೆದ ಪೌಲ್ಸೆನ್ ಗೋಲು ಬಾರಿಸಿ ಮುನ್ನಡೆಗೆ ಕಾರಣರಾದರು.

ಸರಾನ್ಸ್ಕ್[ಜೂ.17]: ಯೂಸುಫ್ ಪೌಲ್ಸೆನ್ 59ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಇಲ್ಲಿ ನಡೆದ ‘ಸಿ ಗುಂಪಿನ ಪಂದ್ಯದಲ್ಲಿ ಪೆರು ವಿರುದ್ಧ ಡೆನ್ಮಾರ್ಕ್ 1-0 ಗೋಲಿನಿಂದ ಗೆಲುವು ಸಾಧಿಸಿತು. ಇದರೊಂದಿಗೆ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿತು.

ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ, ದ್ವಿತೀಯಾರ್ಧದಲ್ಲಿ ಡೆನ್ಮಾರ್ಕ್ ವಿಭಿನ್ನ ತಂತ್ರಗಾರಿಕೆಯೊಂದಿಗೆ ಆಡಿತು. ದ್ವಿತೀಯಾರ್ಧ ಆರಂಭಗೊಂಡು 14ನೇ ನಿಮಿಷದಲ್ಲೇ ಎರಿಕ್ಸನ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ಅದ್ಭುತವಾಗಿ ನಿಯಂತ್ರಣಕ್ಕೆ ಪಡೆದ ಪೌಲ್ಸೆನ್ ಗೋಲು ಬಾರಿಸಿ ಮುನ್ನಡೆಗೆ ಕಾರಣರಾದರು.

ಇದರೊಂದಿಗೆ ಡೆನ್ಮಾರ್ಕ್ ಪರ ಸತತ 2 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೋಲು ಬಾರಿಸಿದ ಹೆಗ್ಗಳಿಕೆಗೆ ಪೌಲೆನ್ಸ್ ಪಾತ್ರರಾದರು.

loader