ಫಿಫಾ ವಿಶ್ವಕಪ್: ಸ್ಪೇನ್-ಪೋರ್ಚುಗಲ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ
ಪಂದ್ಯದ ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಶೂಟೌಟ್’ನಲ್ಲಿ ನಾಯಕ ರೊನಾಲ್ಡೋ ಭರ್ಜರಿ ಗೋಲು ದಾಖಲಿಸಿ ಪೋರ್ಚುಗಲ್’ಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ಸ್ಪೇನ್ ಕೂಡಾ ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿತು.
ರಷ್ಯಾ[ಜೂ.16]: 2010ರ ವಿಶ್ವಚಾಂಪಿಯನ್ಸ್ ಸ್ಪೇನ್ ಹಾಗೂ ಯೂರೋಪಿಯನ್ ಚಾಂಪಿಯನ್ ಪೋರ್ಚುಗಲ್ ನಡುವಿನ ಪಂದ್ಯ 3-3 ಗೋಲುಗಳಿಂದ ರೋಚಕ ಅಂತ್ಯ ಕಂಡಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಂದ್ಯ ರೋಚಕ ಡ್ರಾನಲ್ಲಿ ಮುಕ್ತಾಯವಾಯಿತು.
ಪಂದ್ಯದ ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಶೂಟೌಟ್’ನಲ್ಲಿ ನಾಯಕ ರೊನಾಲ್ಡೋ ಭರ್ಜರಿ ಗೋಲು ದಾಖಲಿಸಿ ಪೋರ್ಚುಗಲ್’ಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ ಸ್ಪೇನ್ ಕೂಡಾ ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿತು. ಕೊನೆಗೂ 24ನೇ ನಿಮಿಷದಲ್ಲಿ ಡಿಯಾಗೋ ಕೋಸ್ಟಾ ಪೋರ್ಚುಗಲ್’ನ ರಕ್ಷಣಾ ಕೋಟೆಯನ್ನು ವಂಚಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಉಭಯ ತಂಡಗಳು ಆಕ್ರಮಣಕಾರಿಯಾಟಕ್ಕೆ ಮುಂದಾದವು. ಈ ಸಂದರ್ಭದಲ್ಲಿ ಸ್ಪೇನ್ ಗೋಲ್ ಕೀಪರ್ ಡೇವಿಡ್ ಡಿ ಗಿಯಾ ಮಾಡಿದ ಪ್ರಮಾದದ ಲಾಭ ಪಡೆದುಕೊಂಡ ರೊನಾಲ್ಡೊ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡ 2-1ರ ಮುನ್ನಡೆ ಸಾಧಿಸುವಂತೆ ನೋಡಿಕೊಂಡರು.
ಸ್ಪೇನ್ ಮುನ್ನಡೆ ಕಾಯ್ದುಕೊಂಡ ಬಳಿಕ ಕೊಂಚ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಈ ಅವಕಾಶ ಬಳಸಿಕೊಂಡ ಸ್ಪೇನ್’ನ ಡಿಯಾಗೋ ಕೋಸ್ಟಾ ಮತ್ತೊಂದು ಗೋಲು ಬಾರಿಸಿ 2-2 ಸಮಬಲ ಸಾಧಿಸುವಂತೆ ಮಾಡಿದರು. ಇದಾಗಿ ಮತ್ತೆ ಮೂರು ನಿಮಿಷ ಮುಗಿಯುವಷ್ಟರಲ್ಲಿ ನ್ಯಾಚೋ ಮನಮೋಹಕ ಬಾರಿಸಿದ ಮನಮೋಹಕ ಗೋಲು ಸ್ಪೇನ್’ಗೆ 3-2 ಗೋಲುಗಳ ಮುನ್ನಡೆ ದೊರೆಯುವಂತೆ ಮಾಡಿತು. ಬಳಿಕ ಪೋರ್ಚುಗಲ್ ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೇವಲ 2 ನಿಮಿಷಗಳಿದ್ದಾಗ ರೊನಾಲ್ಡೋ ಮಿಂಚಿನ ಗೋಲು ದಾಖಲಿಸುವ ಮೂಲಕ ಪಂದ್ಯ ರೋಚಕ ಡ್ರಾ ಸಾಧಿಸುವಂತೆ ಮಾಡಿದರು. ಇದು ವೃತ್ತಿ ಜೀವನದಲ್ಲಿ ರೊನಾಲ್ಡೋ ಬಾರಿಸಿದ 51ನೇ ಹ್ಯಾಟ್ರಿಕ್ ಹಾಗೂ ಸ್ಪೇನ್ ಪರ ಬಾರಿಸಿದ 6ನೇ ಹ್ಯಾಟ್ರಿಕ್ ಎನಿಸಿದೆ.