ಫಿಫಾ ವಿಶ್ವಕಪ್ 2018: ಹಾಲಿ ಚಾಂಪಿಯನ್ ಜರ್ಮನಿಗೆ ಶಾಕ್!

FIFA World Cup 2018: Mexico stun Germany 1-0
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಗಳೆಲ್ಲಾ ಬುಡಮೇಲಾಗುತ್ತಿದೆ.  ಹಾಲಿ ಚಾಂಪಿಯನ್ ಜರ್ಮನಿ ತಂಡ ಶುಭಾರಂಭ ಮಾಡಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಮೆಕ್ಸಿಕೋ ಶಾಕ್ ನೀಡಿದೆ. ಈ ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.

ರಷ್ಯಾ(ಜೂ.17): ಹಾಲಿ ಚಾಂಪಿಯನ್ ಜರ್ಮನಿ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ತನ್ನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮೆಕ್ಸಿಕೋ ವಿರುದ್ಧ ಹೋರಾಡಿದ ಜರ್ಮನಿ 0-1 ಅಂತರದಲ್ಲಿ ಶರಣಾಗಿದೆ.

ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಮೆಕ್ಸಿಕೋ ತಂಡದ ಅಗ್ರೆಸ್ಸೀವ್ ಆಟಕ್ಕೆ ಹಾಲಿ ಚಾಂಪಿಯನ್ ಜರ್ಮನಿ ಬೆಚ್ಚಿಬಿದ್ದಿತು. ಮೊದಲ ನಿಮಿಷದಿಂದಲೇ ಮೆಕ್ಸಿಕೋ ಬಾಲ್ ಪೊಸಿಶನ್ ತನ್ನಲ್ಲೇ ಇಟ್ಟುಕೊಂಡು ಆಟ ಮುಂದುವರಿಸಿತು.

ಜರ್ಮನಿ ಆಕ್ರಮಣವನ್ನ ತಡೆದ ಮೆಕ್ಸಿಕೋ 35ನೇ ನಿಮಿಷದಲ್ಲಿ ಹಿರ್ವಿಂಗ್ ಲೋಝಾನೋ ಅದ್ಬುತ ಗೋಲು ಸಿಡಿಸಿ 1-0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಮೆಕ್ಸಿಕೋ ಮುನ್ನಡೆಯನ್ನ ಕಾಯ್ದುಕೊಂಡಿತು.

ಸೆಕೆಂಡ್ ಹಾಫ್‌ನಲ್ಲಿ ಜರ್ಮನಿ ತಿರುಗೇಟು ನೀಡೋ ಸೂಚನೆ ನೀಡಿತು. ಆದರೆ ಸಾಧ್ಯವಾಗಲಿಲ್ಲ. ಮೆಕ್ಸಿಕೋ ತಂಡದ ಡಿಫೆನ್ಸ್ ಭೇದಿಸಲು ಜರ್ಮನಿ ವಿಫಲವಾಯಿತು. 90+3 ನಿಮಿಷಗಳ ಆಟದಲ್ಲಿ ಮೆಕ್ಸಿಕೋ 1-0 ಅಂತರದಲ್ಲಿ ಗೆಲುವು ಸಾಧಿಸಿತು.


 

loader