Asianet Suvarna News Asianet Suvarna News

ಫಿಫಾ ಮೆಲುಕು: ಪಶ್ಚಿಮ ಜರ್ಮನಿಗೆ 1990ರಲ್ಲಿ 3ನೇ ವಿಶ್ವಕಪ್

14ನೇ ಫಿಫಾ ಫುಟ್ಬಾಲ್ ವಿಶ್ವಕಪ್ 1990ರಲ್ಲಿ ಇಟಲಿಯಲ್ಲಿ ನಡೆಯಿತು. 2 ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ 2ನೇ ರಾಷ್ಟ್ರ (ಮೊದಲು ಮೆಕ್ಸಿಕೊ)ಎನ್ನುವ ಹೆಗ್ಗಳಿಕೆಗೆ ಇಟಲಿ ಪಾತ್ರವಾಯಿತು.

FIFA World Cup 2018: Flashback of 1990 FIFA World Cup

ಬೆಂಗಳೂರು[ಜೂ.09]: 14ನೇ ಫಿಫಾ ಫುಟ್ಬಾಲ್ ವಿಶ್ವಕಪ್ 1990ರಲ್ಲಿ ಇಟಲಿಯಲ್ಲಿ ನಡೆಯಿತು. 2 ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ 2ನೇ ರಾಷ್ಟ್ರ (ಮೊದಲು ಮೆಕ್ಸಿಕೊ)ಎನ್ನುವ ಹೆಗ್ಗಳಿಕೆಗೆ ಇಟಲಿ ಪಾತ್ರವಾಯಿತು. 
116 ರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಗಳು ಟೂರ್ನಿಗೆ ಪ್ರವೇಶಿಸಿದವು. ಅರ್ಹತಾ ಸುತ್ತಿನ ಬಳಿಕ 22 ತಂಡಗಳು ಅರ್ಹತೆ ಪಡೆದವು. ಜತೆಗೆ ಆತಿಥ್ಯ ವಹಿಸುವ ರಾಷ್ಟ್ರ ಇಟಲಿ ಹಾಗೂ ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ನೇರ ಪ್ರವೇಶ ದೊರೆಯಿತು. 24 ತಂಡಗಳು ಸೆಣಸಿದ ಪಂದ್ಯಾವಳಿಯ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 1-0 ಗೋಲಿನಿಂದ ಗೆಲುವು ದಾಖಲಿಸಿದ ಪಶ್ಚಿಮ ಜರ್ಮನಿ 3ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. ಕಳೆದ ವಿಶ್ವಕಪ್‌ನ ಫೈನಲ್‌ನಲ್ಲಿ ಅರ್ಜೆಂಟೀನಾ, ಪಶ್ಚಿಮ ಜರ್ಮನಿ ಸೋಲಿಸಿ ಕಪ್ ಗೆದ್ದಿತ್ತು. ಇಟಲಿ ಹಾಗೂ ಇಂಗ್ಲೆಂಡ್ ಕ್ರಮವಾಗಿ 3 ಹಾಗೂ 4ನೇ ಸ್ಥಾನ ಪಡೆದವು.
ಎರಡೂ ತಂಡಗಳು ತಮ್ಮ ಸೆಮೀಸ್ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋತವು. ಸರಾಸರಿ 2.21 ಗೋಲುಗಳೊಂದಿಗೆ ಈ ವಿಶ್ವಕಪ್ ಅತ್ಯಂತ ಕಳಪೆ ಗೋಲಿನ ದಾಖಲೆಗೆ ಸಾಕ್ಷಿಯಾದ ಟೂರ್ನಿ ಎನಿಸಿಕೊಂಡಿತು.
* ವರ್ಷ: 1990
* ಚಾಂಪಿಯನ್: ಪಶ್ಚಿಮ ಜರ್ಮನಿ
* ರನ್ನರ್-ಅಪ್: ಅರ್ಜೆಂಟೀನಾ

Follow Us:
Download App:
  • android
  • ios