ಫಿಫಾ ವಿಶ್ವಕಪ್ ಟೂರ್ನಿ ಅಭಿಮಾನಿಗಳಿಗೆ ಬಹುದೊಡ್ಡ ಕ್ರೀಡಾ ಹಬ್ಬ. ಹೀಗಾಗಿ ವಿಶ್ವಕಪ್‌ಗಾಗಿ ಆಗಮಿಸೋ ಅಭಿಮಾನಿಗಳಿಗೆ ಗೆಲುವಿನ ಸಿಹಿ ಸಿಕ್ಕಿದರೆ ಅವರ ಸಂತಸಕ್ಕೆ ಪಾರವೇ ಇರಲ್ಲ. ಹೀಗೆ ಅತೀವ ಸಂತಸದಿಂದಿ ಅಭಿಮಾನಿಯೊರ್ವ ಪತ್ರಕರ್ತೆಗೆ ಮುತ್ತಿಟ್ಟು ಎಡವಟ್ಟು ಮಾಡಿದ್ದಾರೆ. ಇಲ್ಲಿದೆ ಅಭಿಮಾನಿಯ ಕಿಸ್ ವಿಡೀಯೋ.
ರಷ್ಯಾ(ಜೂ.26): ಫಿಫಾ ವಿಶ್ವಕಪ್ ಟೂರ್ನಿಯ ನೇರಪ್ರಸಾರದ ವರದಿಗಾರಿಕೆಯಲ್ಲಿದ್ದ ಬ್ರೆಜಿಲ್ ಪತ್ರಕರ್ತೆಗೆ ಅಭಿಮಾನಿಯೊರ್ವ ಮುತ್ತಿಟ್ಟ ಪ್ರಸಂಗ ನಡೆದಿದೆ. ಎಕೆಟರ್ನಿಂಗ್‌ಬರ್ಗ್‌ನಲ್ಲಿ ಪತ್ರಕರ್ತೆ ಜೂಲಿ ಗಿಮಾರೆಸ್ ಖಾಸಗಿ ಸುದ್ದಿ ವಾಹಿನಿಯ ನೇರಪ್ರಸಾರದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಯೊರ್ವ ನೇರ ಪ್ರಸಾರದಲ್ಲೇ ಮುತ್ತಿಟ್ಟು ಎಡವಟ್ಟು ಮಾಡಿದ್ದಾನೆ.
ನೇರಪ್ರಸಾರಕ್ಕಾಗಿ ನಿಂತಿದ್ದ ಜುಲಿ ಅಭಿಮಾನಿ ಮುತ್ತಿಡಲು ಯತ್ನಿಸಿದ್ದಾನೆ. ಆದರೆ ಮುತ್ತಿನಿಂದ ತಪ್ಪಿಸಿಕೊಂಡ ಜುಲಿಯನ್ ಅಭಿಮಾನಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದೆಂದು ಈ ರೀತಿ ಮಾಡಬಾರದಾಗಿ ಜುಲಿಯನ್ ಎಚ್ಚರಿಸಿದ್ದಾರೆ.
ನೇರಪ್ರಸಾದಲ್ಲೇ ಜುಲಿಯನ್‌ಗೆ ಈ ರೀತಿ ಮುತ್ತಿಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಜೂಲಿಯನ್‌ಗೆ ಅಭಿಮಾನಿಗಳು ಕಿಸ್ ನೀಡಿದ್ದಾರೆ. ಪದೇ ಪದೇ ಜುಲಿಗೆ ಕಿಸ್ ನೀಡುತ್ತಿರುವುದು ಹಲವು ಅನುಮಾನಗಳು ಕಾಡತೊಡಗಿದೆ. ಈ ಪ್ರಕರಣವನ್ನ ಪ್ರಚಾರಕ್ಕಾಗಿ ಮಾಡಲಾಗಿದೆ ಅನ್ನೋ ಅನುಮಾನಗಳು ಮೂಡಿದೆ.
