Asianet Suvarna News Asianet Suvarna News

ಅಂಡರ್-17 ಫುಟ್ಬಾಲ್ ವಿಶ್ವಕಪ್: ಮೊದಲ ಸೆಮೀಸ್ ಕೋಲ್ಕತಾಗೆ ಸ್ಥಳಾಂತರ

ಕಳೆದ ಕೆಲ ವಾರಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಕ್ರೀಡಾಂಗಣ ಹಾಳಾಗಿರುವ ಕಾರಣ ಗುವಾಹಟಿಯಲ್ಲಿ ಅ.25ರಂದು ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯವನ್ನು ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

FIFA U 17 World Cup semi final match to take place in Kolkata
  • Facebook
  • Twitter
  • Whatsapp

ನವದೆಹಲಿ(ಅ.23): ಬ್ರೆಜಿಲ್ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಗುವಾಹಟಿಯಲ್ಲಿ ನಡೆಯಬೇಕಿದ್ದ ಫಿಫಾ ಅಂಡರ್ 17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಕೋಲ್ಕತಾಗೆ ಸ್ಥಳಾಂತರಗೊಳಿಸಲಾಗಿದೆ.

ಕಳೆದ ಕೆಲ ವಾರಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಕ್ರೀಡಾಂಗಣ ಹಾಳಾಗಿರುವ ಕಾರಣ ಗುವಾಹಟಿಯಲ್ಲಿ ಅ.25ರಂದು ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯವನ್ನು ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಸಂಜೆ 5ಕ್ಕೆ ಬ್ರೆಜಿಲ್ ಹಾಗೂ ಇಂಗ್ಲೆಂಡ್ ನಡುವೆ ಮೊದಲ ಸೆಮೀಸ್ ನಡೆದರೆ, ಮಾಲಿ ಹಾಗೂ ಸ್ಪೇನ್ ನಡುವಿನ 2ನೇ ಸೆಮಿಫೈನಲ್ ಪೂರ್ವನಿಗದಿಯಂತೆ ನವಿ ಮುಂಬೈನಲ್ಲಿ ರಾತ್ರಿ 8ಕ್ಕೆ ನಡೆಯಲಿದೆ.

Follow Us:
Download App:
  • android
  • ios