ಇನ್ನು ಶ್ರೇಯಾಂಕ ಪಟ್ಟಿಯಲ್ಲಿ ಜರ್ಮನಿ ಅಗ್ರಸ್ಥಾನಕ್ಕೇರಿದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ನವದೆಹಲಿ(ಸೆ.15): ಫಿಫಾ ಶ್ರೇಯಾಂಕದಲ್ಲಿ ಅಗ್ರ 100ರ ಪಟ್ಟಿಯಿಂದ ಭಾರತ ಫುಟ್ಬಾಲ್ ತಂಡ ಹೊರಬಿದ್ದಿದೆ.

ಕಳೆದ ತಿಂಗಳು 97ನೇ ಸ್ಥಾನದಲ್ಲಿದ್ದ ಭಾರತ ಇದೀಗ 10 ಸ್ಥಾನ ಕುಸಿತ ಕಂಡು, 107ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. 97ನೇ ಸ್ಥಾನ ಪಡೆದ ನಂತರ ಭಾರತ ತಾನಾಡಿದ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾ ಸಾಧಿಸಿತ್ತು.

ಮೇ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸುನಿಲ್ ಚೆಟ್ರಿ ಪಡೆ 100ರಿಂದ ಕೆಳಕ್ಕಿಳಿದಿದೆ. ಜುಲೈನಲ್ಲಿ ತಂಡ 96ನೇ ಸ್ಥಾನ್ಕಕೇರಿದ ಸಾಧನೆ ಮಾಡಿತ್ತು. ಇನ್ನು ಶ್ರೇಯಾಂಕ ಪಟ್ಟಿಯಲ್ಲಿ ಜರ್ಮನಿ ಅಗ್ರಸ್ಥಾನಕ್ಕೇರಿದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಪೋರ್ಚುಗಲ್, ಅರ್ಜೆಂಟೀನಾ ಹಾಗೂ ಬೆಲ್ಜಿಯಂ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಪಡೆದಿಕೊಂಡಿವೆ