ಇರಾನ್‌ನ ನೂರಾರು ಅಭಿಮಾನಿಗಳು, ಇಲ್ಲಿ ಪೋರ್ಚುಗಲ್ ತಂಡ ಉಳಿದುಕೊಂಡಿದ್ದ ಹೋಟೆಲ್ ಹೊರಗೆ ಜೋರಾಗಿ ಸಂಗೀತ ಹಾಕಿ, ವಾದ್ಯಗಳನ್ನು ನುಡಿಸಿ ಭಾರೀ ಗದ್ದಲ ಮಾಡುತ್ತಾ ಆಟಗಾರರ ನಿದ್ದೆ, ತಾಳ್ಮೆ ಹಾಳು ಮಾಡಲು ಪ್ರಯತ್ನಿಸಿದರು.
ಸರಾನ್ಸ್ಕ್(ಜೂ.26]: ಸೋಮವಾರ ಪೋರ್ಚುಗಲ್ ವಿರುದ್ಧ ತಮ್ಮ ತಂಡ ನಿರ್ಣಾಯಕ ಪಂದ್ಯವನ್ನಾಡಲಿದೆ ಎನ್ನುವುದನ್ನು ಅರಿತ ಇರಾನ್ ಅಭಿಮಾನಿಗಳು, ಎದುರಾಳಿಯ ನಿದ್ದೆಗೆಡಿಸಲು ಕುತಂತ್ರ ನಡೆಸಿದ್ದು ಭಾರೀ ಸುದ್ದಿಯಾಗಿದೆ.
ಇರಾನ್‌ನ ನೂರಾರು ಅಭಿಮಾನಿಗಳು, ಇಲ್ಲಿ ಪೋರ್ಚುಗಲ್ ತಂಡ ಉಳಿದುಕೊಂಡಿದ್ದ ಹೋಟೆಲ್ ಹೊರಗೆ ಜೋರಾಗಿ ಸಂಗೀತ ಹಾಕಿ, ವಾದ್ಯಗಳನ್ನು ನುಡಿಸಿ ಭಾರೀ ಗದ್ದಲ ಮಾಡುತ್ತಾ ಆಟಗಾರರ ನಿದ್ದೆ, ತಾಳ್ಮೆ ಹಾಳು ಮಾಡಲು ಪ್ರಯತ್ನಿಸಿದರು. ಸ್ವತಃ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ ಕಿಟಿಕಿಯಿಂದ ಇರಾನ್ ಅಭಿಮಾನಿಗಳಿಗೆ ಸುಮ್ಮನಿರುವಂತೆ ಮನವಿ ಮಾಡಿದರೂ, ಏನೂ ಪ್ರಯೋಜನವಾಗಲಿಲ್ಲ ಎಂದು ವರದಿಯಾಗಿದೆ.
ಈ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡದ ಹೋರಾಟವನ್ನು ಏಕಾಂಗಿಯಾಗಿ ಮುನ್ನಡೆಸುತ್ತಿರುವ ಕ್ರಿಸ್ಟಿಯಾನೋ ರೊನಾಲ್ಡೋ ತಂಡದ ಪರ 4 ಗೋಲು ಬಾರಿಸಿದ್ದಾರೆ.
