ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಬೆಲ್ಜಿಯಂ

ಫಿಫಾ ವಿಶ್ವಕಪ್ ಟೂರ್ನಿ 3ನೇ ಸ್ಥಾನಕ್ಕಾ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಿತ್ತು. ರೋಚಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿದ ಬೆಲ್ಜಿಯಂ 3ನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Fifa 2018 belgium third in world Cup after 2-0 win over England

ರಷ್ಯಾ(ಜು.14): ಫಿಫಾ ವಿಶ್ವಕಪ್ ಟೂರ್ನಿಯ 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಬೆಲ್ಜಿಯಂ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಬೆಲ್ಜಿಯಂ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ವಿಶ್ವಕಪ್ ಕನಸಿನೊಂದಿಗೆ ರಷ್ಯಾಗೆ ಪ್ರಯಾಣ ಬೆಳೆಸಿದ ಇಂಗ್ಲೆಂಡ್ ಕೊನೆಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ರೋಚಕ ಹೋರಾಟದ ಆರಂಭದಲ್ಲೇ ಬೆಲ್ಜಿಯಂ ಮೇಲುಗೈ ಸಾಧಿಸಿತು. 4ನೇ ನಿಮಿಷದಲ್ಲಿ ಬೆಲ್ಜಿಯಂನ ಥಾಮಸ್ ಮುನಿರ್ ಗೋಲು ಬಾರಿಸೋ ಮೂಲಕ ಮುನ್ನಡೆ ತಂದುಕೊಟ್ಟರು.

ಮೊದಲಾರ್ಧದಲ್ಲಿ ಅತ್ಯುತ್ತಮ ಹೋರಾಟ ನೀಡಿದ ಬೆಲ್ಜಿಯಂ 1-0 ಮುನ್ನಡೆ ಸಾಧಿಸಿತು.  ಆದರೆ ಇಂಗ್ಲೆಂಡ್ ಗೋಲು ಬಾರಿಸಲು ಕಠಿಣ ಹೋರಾಟ ನಡೆಸಿತು. ಆದರೆ ಗೋಲಿನ ಸಿಹಿ ಕಾಣಲಿಲ್ಲ.

ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್ ಹೆಚ್ಚು ಆಕ್ರಮಣಕಾರಿ ಹೋರಾಟ ನೀಡಿತು. ಆದರೆ ಬೆಲ್ಜಿಯಂ ಡಿಫೆನ್ಸ್ ಮುಂದೆ ಇಂಗ್ಲೆಂಡ್ ಪ್ರಯತ್ನಗಳು ವಿಫಲವಾಯಿತು. 82ನೇ ನಿಮಿಷದಲ್ಲಿ ಈಡನ್ ಹಜಾರ್ಡ್ ಗೋಲು ಬಾರಿಸೋ ಮೂಲಕ ಬೆಲ್ಜಿಯಂ 2-0 ಮುನ್ನಡೆ ಸಾಧಿಸಿತು.

ಪಂದ್ಯದ ಅಂತಿಮ ನಿಮಿಷದವರೆಗೂ ಇಂಗ್ಲೆಂಡ್ ಹೋರಾಟ ನಡೆಸಿತು. ಆದರೆ 2-0 ಗೋಲುಗಳ ಅಂತರದೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿ 3ನೇ ಸ್ಥಾನ ಅಲಂಕರಿಸಿತು. ಸಂಪೂರ್ಣ ಪಂದ್ಯದಲ್ಲಿ ಇಂಗ್ಲೆಂಡ್ 58 ಪ್ರತಿಶತ ಬಾಲ್ ಪೊಸಿಶನ್ ಇಟ್ಟುಕೊಂಡಿದ್ದರೂ ಗೋಲು ಮಾತ್ರ ದಾಖಲಾಗಲಿಲ್ಲ. ಹೀಗಾಗಿ ಇಂಗ್ಲೆಂಡ್ 4ನೇ ಸ್ಥಾನ ಪಡೆಯಿತು.

Latest Videos
Follow Us:
Download App:
  • android
  • ios