Asianet Suvarna News Asianet Suvarna News

ಏಷ್ಯಾ ಮಹಿಳಾ ಬ್ಯಾಸ್ಕೆಟ್'ಬಾಲ್ ಬಿ ಡಿವಿಷನ್: ಭಾರತ ಚಾಂಪಿಯನ್

ಮೊದಲ ಕ್ವಾರ್ಟರ್'ನಲ್ಲಿ 16-19, 2ನೇ ಕ್ವಾರ್ಟರ್'ನಲ್ಲಿ 15-20, 3ನೇ ಕ್ವಾರ್ಟರ್'ನಲ್ಲಿ 19-19ರಿಂದ ಸಮಬಲ ಸಾಧಿಸಿತು. ಆದರೆ 4ನೇ ಕ್ವಾರ್ಟರ್'ನಲ್ಲಿ 25-15ರಿಂದ ಮುನ್ನಡೆ ಪಡೆಯುವಲ್ಲಿ ಸಫಲವಾದ ಭಾರತ ತಂಡ ಕಜಕಸ್ತಾನದ ವಿರುದ್ಧ ಗೆಲುವು ಪಡೆಯಿತು. ಭಾರತದ ಪರ ಸಕೀರ ಜೀನಾ 20, ಗ್ರೀಮಾ 14 ಅಂಕ ಗಳಿಸಿ ಮಿಂಚಿದರು.

fiba asia women basketball b division india champions

ಬೆಂಗಳೂರು: ಪಂದ್ಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್'ಗಳು ಬಾಕಿ ಇದ್ದ ವೇಳೆಯಲ್ಲಿ ತಾರಾ ಆಟಗಾರ್ತಿ ಶಿರಿನ್ ಲಿಮಯೆ (17 ಅಂಕ) ದಾಖಲಿಸಿದ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ಏಷ್ಯಾ ಮಹಿಳಾ ಬ್ಯಾಸ್ಕೆಟ್'ಬಾಲ್ ಪಂದ್ಯಾವಳಿಯ ಬಿ ಡಿವಿಷನ್ ಫೈನಲ್'ನಲ್ಲಿ ಕಜಕಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಕ ಆತಿಥೇಯ ಭಾರತ ತಂಡ 2019ರಲ್ಲಿ ನಡೆಯಲಿರುವ ಏಷ್ಯಾ ಮಹಿಳಾ ಬ್ಯಾಸ್ಕೆಟ್'ಬಾಲ್ ಟೂರ್ನಿಯಲ್ಲಿ ಎ ಡಿವಿಷನ್'ಗೆ ಅರ್ಹತೆ ಗಿಟ್ಟಿಸಿತು.

ಶನಿವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 75-73 ಅಂಕಗಳಿಂದ ಕಜಕಸ್ತಾನ ಎದುರು ಜಯ ಸಾಧಿಸಿತು. ಪಂದ್ಯದ ಆರಂಭದ ಕೆಲ ನಿಮಿಷಗಳ ಕಾಲ ಮುನ್ನಡೆ ಪಡೆದಿದ್ದ ಆತಿಥೇಯ ಭಾರತ, ನಂತರದ ಆಟದಲ್ಲಿ ಹಿನ್ನಡೆ ಸಾಧಿಸಿತು. ಮೊದಲ ಕ್ವಾರ್ಟರ್'ನಲ್ಲಿ 16-19, 2ನೇ ಕ್ವಾರ್ಟರ್'ನಲ್ಲಿ 15-20, 3ನೇ ಕ್ವಾರ್ಟರ್'ನಲ್ಲಿ 19-19ರಿಂದ ಸಮಬಲ ಸಾಧಿಸಿತು. ಆದರೆ 4ನೇ ಕ್ವಾರ್ಟರ್'ನಲ್ಲಿ 25-15ರಿಂದ ಮುನ್ನಡೆ ಪಡೆಯುವಲ್ಲಿ ಸಫಲವಾದ ಭಾರತ ತಂಡ ಕಜಕಸ್ತಾನದ ವಿರುದ್ಧ ಗೆಲುವು ಪಡೆಯಿತು. ಭಾರತದ ಪರ ಸಕೀರ ಜೀನಾ 20, ಗ್ರೀಮಾ 14 ಅಂಕ ಗಳಿಸಿ ಮಿಂಚಿದರು.

ಜಪಾನ್'ಗೆ ಪ್ರಶಸ್ತಿ: ಹಾಲಿ ಚಾಂಪಿಯನ್ ಜಪಾನ್ ತಂಡ ಎ ಡಿವಿಷನ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 74-73 ಅಂಕಗಳಿಂದ ಜಯ ಪಡೆದು ಪ್ರಶಸ್ತಿ ಉಳಿಸಿಕೊಂಡಿತು. ಚೀನಾ ಮಹಿಳೆಯರು ಸೌತ್ ಕೊರಿಯನ್ನರನ್ನು 65-45ರಿಂದ ಸೋಲಿಸಿ 3ನೇ ಸ್ಥಾನ ಗಿಟ್ಟಿಸಿದರು. ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸಿದ ಜಪಾನ್, ಆಸ್ಟ್ರೇಲಿಯಾ, ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳು ಸ್ಪೇನ್'ನಲ್ಲಿ ಮುಂದಿನ ವರ್ಷ ನಡೆಯಲಿರುವ ಮಹಿಳಾ ವಿಶ್ವಕಪ್'ಗೆ ಅರ್ಹತೆ ಪಡೆದವು.

ಇನ್ನು, ಎ ಡಿವಿಷನ್'ನಲ್ಲಿ ಕೊನೆಯ ಸ್ಥಾನ ಗಳಿಸಿದ ಉತ್ತರ ಕೊರಿಯಾದ ಸ್ಥಾನವನ್ನು ಭಾರತೀಯ ಮಹಿಳೆಯರು ತುಂಬಲಿದ್ದಾರೆ. ಉತ್ತರ ಕೊರಿಯಾ ತಂಡವು ಬಿ ಡಿವಿಷನ್'ಗೆ ಹಿಂಬಡ್ತಿ ಹೊಂದಿದೆ. 2019ರಲ್ಲಿ ನಡೆಯಲಿರುವ ಎ ಡಿವಿಷನ್'ನಲ್ಲಿ ಭಾರತದ ಜೊತೆಗೆ ಜಪಾನ್, ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಚೀನೀ ಥೈಪೆ, ನ್ಯೂಜಿಲೆಂಡ್ ಮತ್ತು ಫಿಲಿಪ್ಪೈನ್ಸ್ ತಂಡಗಳು ಇರಲಿವೆ.

ಕನ್ನಡಪ್ರಭ ವಾರ್ತೆ
epaperkannadaprabha.com

Follow Us:
Download App:
  • android
  • ios